ADVERTISEMENT

ಮೆಟ್ರೊ ರೈಲಿನಲ್ಲಿ ಸೈಕಲ್ ಕೊಂಡೊಯ್ಯಲು ಅವಕಾಶ: ಬಿಎಂಆರ್‌ಸಿಎಲ್

​ಪ್ರಜಾವಾಣಿ ವಾರ್ತೆ
Published 8 ಜೂನ್ 2022, 20:18 IST
Last Updated 8 ಜೂನ್ 2022, 20:18 IST
ಮೆಟ್ರೊ
ಮೆಟ್ರೊ   

ಬೆಂಗಳೂರು: ಮೆಟ್ರೊ ರೈಲಿನ ಕೊನೆಯ ಬೋಗಿಯಲ್ಲಿ, ಮಡಿಸಬಹುದಾದ ಸೈಕಲ್ ಕೊಂಡೊಯ್ಯಲು ಅವಕಾಶ ಇದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ತಿಳಿಸಿದೆ.

‘15 ಕೆ.ಜಿ ತೂಕ ಮೀರದ ಸೈಕಲ್ ಕೊಂಡೊಯ್ಯಬಹುದು. ನಿಲ್ದಾಣ ಪ್ರವೇಶದ ಸಂದರ್ಭದಲ್ಲಿ ಬ್ಯಾಗೇಜ್‌ ಸ್ಕ್ಯಾನರ್ ಮೂಲಕ ಭದ್ರತಾ ತಪಾಸಣೆಗೆ ಒಳಪಡಿಸಬೇಕು. ಮೆಟ್ರೊ ಬೋಗಿಯ ಒಳಭಾಗದಲ್ಲಿ ಹಾನಿಯಾಗದಂತೆ, ಸಹ ಪ್ರಯಾಣಿಕರಿಗೆ ತೊಂದರೆ ಆಗದಂತೆ ನೋಡಿಕೊಂಡು ಪ್ಯಾಕ್ ಮಾಡಬೇಕು’ ಎಂದೂ ವಿವರಿಸಿದೆ. ಸೈಕಲ್ ಕೊಂಡೊಯ್ಯಲು ಯಾವುದೇ ಶುಲ್ಕ ಇಲ್ಲ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT