ADVERTISEMENT

ಬೆಂಗಳೂರು| ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ಹಳಿ ಮೇಲೆ ಬಿದ್ದ ಬಾಲಕನ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2024, 8:05 IST
Last Updated 2 ಆಗಸ್ಟ್ 2024, 8:05 IST
<div class="paragraphs"><p>ಮೆಟ್ರೊ ನಿಲ್ದಾಣ</p></div>

ಮೆಟ್ರೊ ನಿಲ್ದಾಣ

   

-ಸಾಂದರ್ಭಿಕ ಚಿತ್ರ

ಬೆಂಗಳೂರು: ಪೋಷಕರೊಂದಿಗೆ ಆಟವಾಡುತ್ತಿದ್ದ ಬಾಲಕನೊಬ್ಬ ಆಕಸ್ಮಿಕವಾಗಿ ಹಳಿ ಮೇಲೆ ಬಿದ್ದಿರುವ ಘಟನೆ ನಗರದ ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ನಡೆದಿದೆ.

ADVERTISEMENT

ಕೂಡಲೇ ಎಚ್ಚೆತ್ತ ಮೆಟ್ರೊ ಸಿಬ್ಬಂದಿ ತುರ್ತು ರೈಲು ನಿಲುಗಡೆ ವ್ಯವಸ್ಥೆಯ ಮೂಲಕ ರೈಲು ಸಂಚಾರವನ್ನು ನಿಲ್ಲಿಸಿದ್ದಾರೆ. ಬಳಿಕ ಬಾಲಕನನ್ನು ರಕ್ಷಿಸಿಲಾಗಿದೆ. ಘಟನೆಯಲ್ಲಿ ಬಾಲಕನ ಎಡ ಕಿವಿಗೆ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸರ್‌ ಸಿವಿ ರಾಮನ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ಲಾಟ್‌ಫಾರ್ಮ್– 2ರಲ್ಲಿ ಗುರುವಾರ ರಾತ್ರಿ 9.08ಕ್ಕೆ ಘಟನೆ ನಡೆದಿತ್ತು. ಬಳಿಕ 9.15ರ ಸುಮಾರಿಗೆ ಎಂದಿನಂತೆ ರೈಲುಗಳ ಸೇವೆ ಪುನರಾರಂಭವಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.