ADVERTISEMENT

Namma Metro | ನಾಳೆಯಿಂದ ನಾಗಸಂದ್ರ–ಮಾದಾವರ ಮೆಟ್ರೊ ಸಂಚಾರ: ಟಿಕೆಟ್ ದರ ಎಷ್ಟು?

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 12:57 IST
Last Updated 6 ನವೆಂಬರ್ 2024, 12:57 IST
<div class="paragraphs"><p>ಬೆಂಗಳೂರು ಮೆಟ್ರೊ</p></div>

ಬೆಂಗಳೂರು ಮೆಟ್ರೊ

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ನಮ್ಮ ಮೆಟ್ರೊ ಹಸಿರು ಮಾರ್ಗದ ವಿಸ್ತರಿತ ಪ್ರದೇಶ ನಾಗಸಂದ್ರ–ಮಾದಾವರ ನಡುವೆ ಮೆಟ್ರೊ ರೈಲು ಸಾರ್ವಜನಿಕ ಸಂಚಾರಕ್ಕೆ ನ.7ರಂದು ತೆರೆದುಕೊಳ್ಳಲಿದೆ.

ADVERTISEMENT

ಬೆಳಿಗ್ಗೆ 5ಕ್ಕೆ ಮಾದಾವರದಿಂದ ಮೊದಲ ವಾಣಿಜ್ಯ ಸಂಚಾರ ಪ್ರಾರಂಭವಾಗಲಿದೆ. ರಾತ್ರಿ 11ಕ್ಕೆ ಕೊನೆಯ ರೈಲು ಹೊರಡಲಿದೆ. ನಾಗಸಂದ್ರ–ಮಾದಾವರ ನಡುವೆ ಪ್ರತಿ 10 ನಿಮಿಷಕ್ಕೆ ಒಂದು ರೈಲು ಸಂಚರಿಸಲಿದೆ. ಹಸಿರು ಮಾರ್ಗದ ಇತರ ಪ್ರದೇಶಗಳ್ಲಲಿ ರೈಲು ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಮೆಟ್ರೊ ಪ್ರಯಾಣದ ಕನಿಷ್ಠ ದರ ₹ 10 ಹಾಗೂ ಗರಿಷ್ಠ ದರ ₹ 60 ಇರಲಿದೆ ಎಂದು ಮಾಹಿತಿ ನೀಡಿದ್ದಾರೆ.

ಸುದೀರ್ಘ ಏಳು ವರ್ಷ:

ಹಸಿರು ಮಾರ್ಗದಲ್ಲಿ 3.7 ಕಿ.ಮೀ. ಉದ್ದದಲ್ಲಿ ಮೂರು ನಿಲ್ದಾಣಗಳನ್ನಷ್ಟೇ ಹೊಂದಿರುವ ಈ ಕಾಮಗಾರಿಗೆ 2017ರ ಏಪ್ರಿಲ್ ತಿಂಗಳಲ್ಲಿ ಚಾಲನೆ ನೀಡಲಾಗಿತ್ತು.

ಭೂಸ್ವಾಧೀನ ಪ್ರಕ್ರಿಯೆಯಲ್ಲಿ ತೊಡಕು ಉಂಟಾಗಿ ಪ್ರಕರಣ ನ್ಯಾಯಾಲಯದ ಮೆಟ್ಟಲೇರಿದ್ದು, ಕೋವಿಡ್‌ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದ್ದೂ ಸೇರಿದಂತೆ ವಿವಿಧ ಕಾರಣಗಳಿಂದ ಏಳು ವರ್ಷ ಕುಂಟುತ್ತಾ ಸಾಗಿ, 2024ರಲ್ಲಿ ಪೂರ್ಣಗೊಂಡಿತ್ತು. 27 ತಿಂಗಳಲ್ಲಿ ಮುಗಿಯಬೇಕಿದ್ದ ಕಾಮಗಾರಿ 92 ತಿಂಗಳು ಪೂರ್ಣಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.