ADVERTISEMENT

ಬೆಂಗಳೂರು: ಕೈ ಸಾಲ ವಾಪಸ್‌ ನೀಡದ್ದಕ್ಕೆ ಕೊಲೆ

ಚಾಕುವಿನಿಂದ ಇರಿದು ಕೊಲೆ: ಪರಾರಿಯಾಗಿದ್ದ ಆರೋಪಿ ಸೆರೆ

​ಪ್ರಜಾವಾಣಿ ವಾರ್ತೆ
Published 11 ಮೇ 2024, 23:45 IST
Last Updated 11 ಮೇ 2024, 23:45 IST
ಆರೋಪಿ ವಿಠಲ್‌
ಆರೋಪಿ ವಿಠಲ್‌   

ಬೆಂಗಳೂರು: ಕೈ ಸಾಲ ವಾಪಸ್‌ ನೀಡಿಲ್ಲ ಎಂಬ ವಿಚಾರಕ್ಕೆ ಸ್ನೇಹಿತನ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಪರಾರಿಯಾಗಿದ್ದ ಆರೋಪಿಯನ್ನು ಶ್ರೀರಾಮಪುರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ವಿಠಲ್‌ ಅಲಿಯಾಸ್‌ ಪಾಂಡು (45) ಬಂಧಿತ. 

‘ಮೇ 1ರಂದು ಓಕಳಿಪುರದ ವಾಟಾಳ್‌ ನಾಗರಾಜ್‌ ರಸ್ತೆಯ ರಾಜೀವ್‌ ಗಾಂಧಿ ಸಿಗ್ನಲ್‌ ಮುಕ್ತ ಕಾರಿಡಾರ್‌ ಕೆಳಸೇತುವೆ ಬಳಿ ಮೃತದೇಹ ಇರುವ ಮಾಹಿತಿ ಆಧರಿಸಿ ಹೊಯ್ಸಳ ಗಸ್ತು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದರು. ಕೊಳೆತ ಸ್ಥಿತಿಯಲ್ಲಿ ಶವ ಇತ್ತು. ಮೃತನ ಚಹರೆ ಹಾಗೂ ಗುರುತು ಪತ್ತೆಯಾಗಿರಲಿಲ್ಲ. ಜೇಬಿನಲ್ಲೂ ಯಾವುದೇ ಸುಳಿವು ಇರಲಿಲ್ಲ. ದೇಹದ ಮೇಲೆ ಗಾಯಗಳಿದ್ದರಿಂದ ಕೊಲೆ ಪ್ರಕರಣ ದಾಖಲಿಸಿದ್ದು, ಆರೋಪಿ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಮರಣೋತ್ತರ ಪರೀಕ್ಷೆ ವರದಿಯೂ ಕೊಲೆ ಆಗಿದೆ ಎಂಬುದನ್ನು ದೃಢಪಡಿಸಿತ್ತು. ಮೃತನ ಕುಟುಂಬಸ್ಥರನ್ನು ಪತ್ತೆ ಮಾಡಿ ಮಾಹಿತಿ ಸಂಗ್ರಹಿಸಿ ಆರೋಪಿಯ ಸುಳಿವು ಪತ್ತೆ ಮಾಡಲಾಯಿತು’ ಎಂದು ಪೊಲೀಸರು ಹೇಳಿದರು.

ADVERTISEMENT

‘ಕೊಲೆಯಾದ ಯುವಕ, ಸ್ನೇಹಿತ ದಿಲೀಪ್‌ಗೆ ₹20 ಸಾವಿರ ಕೈ ಸಾಲ ನೀಡಿದ್ದ ಪಾಂಡು ಹಿಂದಿರುಗಿಸಲು ಹಲವು ಬಾರಿ ಮನವಿ ಮಾಡಿದ್ದ. ಇದರಿಂದ ಕುಪಿತಗೊಂಡಿದ್ದ ಆರೋಪಿ, ಕೊಲೆಗೆ ಸಂಚು ರೂಪಿಸಿದ್ದ. ಖಾಲಿ ಪ್ರದೇಶಕ್ಕೆ ಕರೆದೊಯ್ದು ಖಾರದ ಪುಡಿ ಎರಚಿ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದ. ಜೊತೆಗೆ ಸ್ಥಳದಲ್ಲಿ ಬಿದ್ದಿದ್ದ ದೊಡ್ಡ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.