ADVERTISEMENT

ನಾಗವಾರ: ತಡೆಗೋಡೆ ತೆರವಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 22:26 IST
Last Updated 26 ಅಕ್ಟೋಬರ್ 2024, 22:26 IST
<div class="paragraphs"><p>ಚರಂಡಿ</p></div>
   

ಚರಂಡಿ

ಬೆಂಗಳೂರು: ನಾಗವಾರ ಪ್ರದೇಶದ ಹೊಲವೊಂದರ ಖರಾಬು ಸ್ಥಳದಲ್ಲಿ ಮಳೆನೀರಿನ ಚರಂಡಿಗೆ ತಡೆಗೋಡೆ ನಿರ್ಮಿಸಿದ್ದರಿಂದ ಸುತ್ತಮುತ್ತಲಿನ ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಆವಾಂತರ ಸೃಷ್ಟಿಯಾಗಿದೆ. ಕೂಡಲೇ ತಡೆಗೋಡೆಯನ್ನು ತೆರವುಗೊಳಿಸಬೇಕು ಎಂದು ನಾಗವಾರದ ಸ್ಥಳೀಯ ನಿವಾಸಿಗಳು ಆಗ್ರಹಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಥಳೀಯ ಮುಖಂಡ ರಾಜಗೋಪಾಲ್, ‘ಕಾರ್ಲೆ ಇನ್ಫ್ರಾಟೆಕ್ ಸಂಸ್ಥೆಯು ರಾಜಕಾಲುವೆ ಬಳಿ ಸರ್ವೆ ನಂಬರ್ 91/3 ರಲ್ಲಿ 9 ಗುಂಟೆ ಖರಾಬು ಸ್ಥಳವನ್ನು ಅತಿಕ್ರಮಿಸಿ 33 ಅಡಿ ಅಗಲದ ತಡೆಗೋಡೆ ನಿರ್ಮಿಸಿದೆ. ಸರಾಗವಾಗಿ ಹರಿಯಬೇಕಿದ್ದ ನೀರಿಗೆ ತಡೆ ಉಂಟಾಗಿದ್ದರಿಂದ ಮಳೆ ನೀರು, ಅಕ್ಕಪಕ್ಕದ ಮನೆಗಳಿಗೆ ನುಗ್ಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಹಾಗೂ ಕಂದಾಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ADVERTISEMENT

ಜನರಿಗೆ ಸಂಕಷ್ಟ ಉಂಟಾಗುವುದರ ಜೊತೆಗೆ ಹೆಬ್ಬಾಳದಿಂದ ಹೊರಮಾವುವರೆಗಿನ ಕಚ್ಚಾ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೂ ತೊಂದರೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಜಾಗದ ಪರಿಶೀಲನೆ ನಡೆಸಿ, ತಡೆಗೋಡೆ ತೆರವಿಗೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ಮುನಿಯಪ್ಪ, ಸುದರ್ಶನ್ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.