ADVERTISEMENT

ಬೆಂಗಳೂರು: ನಗರದಲ್ಲಿ 12 ಪಬ್‌, ಬಾರ್‌ಗೆ ಬೀಗ

ಬಿಬಿಎಂಪಿ ಆರೋಗ್ಯಾಧಿಕಾರಿಗಳಿಂದ ತಪಾಸಣೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2023, 16:23 IST
Last Updated 20 ಅಕ್ಟೋಬರ್ 2023, 16:23 IST
ನಗರದ ಪಬ್‌, ಬಾರ್‌, ರೆಸ್ಟೊರೆಂಟ್‌ಗಳಲ್ಲಿ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಶುಕ್ರವಾರ ಪರಿಶೀಲನೆ ನಡೆಸಿದರು
ನಗರದ ಪಬ್‌, ಬಾರ್‌, ರೆಸ್ಟೊರೆಂಟ್‌ಗಳಲ್ಲಿ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಶುಕ್ರವಾರ ಪರಿಶೀಲನೆ ನಡೆಸಿದರು   

ಬೆಂಗಳೂರು: ನಗರದಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸದ 12 ಪಬ್‌, ಬಾರ್‌, ರೆಸ್ಟೊರೆಂಟ್‌ಗಳನ್ನು ಬಿಬಿಎಂಪಿ ಮುಚ್ಚಿಸಿದೆ.

ಎಂಟೂ ವಲಯಗಳಲ್ಲಿ ಆರೋಗ್ಯಾಧಿಕಾರಿಗಳು ಶುಕ್ರವಾರ ತಪಾಸಣೆ ನಡೆಸಿದರು. ಪೂರ್ವ ವಲಯದಲ್ಲಿ ಏಳು, ಮಹದೇಪುರದಲ್ಲಿ ಮೂರು, ಬೊಮ್ಮನಹಳ್ಳಿ ವಲಯದಲ್ಲಿ ಎರಡು ಪಬ್‌– ಬಾರ್‌ಗಳಿಗೆ ಬೀಗ ಹಾಕಲಾಗಿದೆ. 

ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1,118 ಉದ್ದಿಮೆಗಳಿಗೆ ಪರವಾನಗಿ ನೀಡಲಾಗಿದ್ದು, ಈ ಪೈಕಿ‌ ಇಂದು 232 ಉದ್ದಿಮೆಗಳನ್ನು ಪರಿಶೀಲಿಸಲಾಗಿದೆ. ಅದರಲ್ಲಿ 86 ಉದ್ದಿಮೆಗಳಿಗೆ ನೋಟಿಸ್ ಜಾರಿಗೊಳಿಸಿದ್ದು, 12 ಉದ್ದಿಮೆಗಳನ್ನು ಮುಚ್ಚಲಾಗಿದೆ ಎಂದು ಆರೋಗ್ಯಾಧಿಕಾರಿ ಡಾ. ಬಾಲಸುಂದರ್ ತಿಳಿಸಿದ್ದಾರೆ.

ADVERTISEMENT

ವಲಯ;ಪರವಾನಗಿ;ತಪಾಸಣೆ;ನೋಟಿಸ್;ಮುಚ್ಚಿರುವ ಸಂಖ್ಯೆ ದಕ್ಷಿಣ; 248; 30; 10; 0 ಪಶ್ಚಿಮ; 167; 78; 20; 0 ಪೂರ್ವ; 222; 25; 18; 07 ರಾಜರಾಜೇಶ್ವರಿನಗರ; 75; 08; 06; 0 ದಾಸರಹಳ್ಳಿ; 34; 29; 08; 0 ಯಲಹಂಕ; 110; 18; 0; 0 ಮಹದೇವಪುರ; 161; 36; 16; 03 ಬೊಮ್ಮನಹಳ್ಳಿ; 101; 08; 08; 02 ಒಟ್ಟು; 1118; 232; 86; 12

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.