ADVERTISEMENT

ಬೆಂಗಳೂರು | ಒಂದೇ ಮಳೆಗೆ ಕಸದ ಆಗರವಾದ ಹೊಸಕೆರೆ

​ಪ್ರಜಾವಾಣಿ ವಾರ್ತೆ
Published 3 ಮೇ 2024, 19:30 IST
Last Updated 3 ಮೇ 2024, 19:30 IST
ಕೆಂಗೇರಿ ಉಪನಗರ ವ್ಯಾಪ್ತಿಯ ಹೊಸಕೆರೆಗೆ ಕಸ–ಕಡ್ಡಿ ಸೇರದಂತೆ ತಡೆಯಲು ನಿರ್ಮಿಸಿದ್ದ ತಡೆ ಗೋಡೆ ಕುಸಿದಿರುವುದು
ಕೆಂಗೇರಿ ಉಪನಗರ ವ್ಯಾಪ್ತಿಯ ಹೊಸಕೆರೆಗೆ ಕಸ–ಕಡ್ಡಿ ಸೇರದಂತೆ ತಡೆಯಲು ನಿರ್ಮಿಸಿದ್ದ ತಡೆ ಗೋಡೆ ಕುಸಿದಿರುವುದು   

ಕೆಂಗೇರಿ: ಉಪನಗರ ವ್ಯಾಪ್ತಿಯಲ್ಲಿ ಶುಕ್ರವಾರ ಬಿದ್ದ ಸಾಮಾನ್ಯ ಮಳೆಗೆ ಕಾಯಕಲ್ಪದ ಹಂತದಲ್ಲಿರುವ ಹೊಸಕೆರೆಯ ಸ್ವರೂಪವೇ ಬದಲಾಗಿದೆ.  

ಕೆಂಗೇರಿ ಉಪನಗರದ ಬಳಿ ಇರುವ ಹೊಸಕೆರೆ ಜೀರ್ಣೋದ್ಧಾರಕ್ಕಾಗಿ ₹8 ಕೋಟಿ ಅನುದಾನ ಬಿಡುಗಡೆಯಾಗಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಕೆರೆಗೆ ಕಸ–ಕಡ್ಡಿ ಸೇರದಂತೆ ತಡೆಯಲು ಕೆಲ ತಿಂಗಳ ಹಿಂದೆ ಇಲ್ಲಿ ಕಲ್ಲುಗಳನ್ನು ಬಳಸಿ ಎರಡು ತಡೆಗೋಡೆ ನಿರ್ಮಿಸಲಾಗಿತ್ತು.

ಶುಕ್ರವಾರ ಮಧ್ಯಾಹ್ನ ಸುರಿದ ಸಾಮಾನ್ಯ ಮಳೆಗೆ ಈ ಎರಡೂ ತಡೆಗೋಡೆಗಳ ಒಂದು ಪಾರ್ಶ್ವ ಕಿತ್ತುಹೋಗಿದ್ದು, ಕಸ-ಕಡ್ಡಿ, ತ್ಯಾಜ್ಯ ಕೆರೆ ಒಡಲನ್ನು ಸೇರಿ, ಕಸದ ತೊಟ್ಟಿಯಂತಾಗಿದೆ.

ADVERTISEMENT

ವಳಗೇರಹಳ್ಳಿ ನಿವಾಸಿಗಳ ಒಕ್ಕೂಟದ ಅಧ್ಯಕ್ಷ ಎನ್. ಕದರಪ್ಪ ಮಾತನಾಡಿ, ‘ಪ್ರತಿ ಮಳೆಗಾಲದಲ್ಲೂ ಇದೇ ಪರಿಸ್ಥಿತಿ ಇರುತ್ತದೆ. ಸರ್ಕಾರದ ಅನುದಾನ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿದೆ. ಈವರೆಗೆ ಮೂರು ಬಾರಿ ಕಾಮಗಾರಿ ಕೈಗೊಳ್ಳಲಾಗಿದೆಯಾದರೂ ಬಿಬಿಎಂಪಿ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯ ಮತ್ತು ಅಸಮರ್ಪಕ ಕಾಮಗಾರಿಯಿಂದ ಕೆರೆ ಅವಸಾನದ ಅಂಚಿಗೆ ತಲುಪುತ್ತಿದೆ’ ಎಂದು ದೂರಿದರು.

ಕೆರೆ ಒಡಲನ್ನು ಸೇರಿರುವ ಕಸ-ಕಡ್ಡಿ ತ್ಯಾಜ್ಯ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.