ADVERTISEMENT

Bengaluru Rains | ಬಿಬಿಎಂಪಿ ಮೇಲೆ ಆಕ್ರೋಶ!

​ಪ್ರಜಾವಾಣಿ ವಾರ್ತೆ
Published 7 ಮೇ 2024, 0:12 IST
Last Updated 7 ಮೇ 2024, 0:12 IST
<div class="paragraphs"><p>ವಿಧಾನಸೌಧ ಮೆಟ್ರೊ ನಿಲ್ದಾಣದ ಬಳಿ ಸೋಮವಾರ ಸುರಿದ ಮಳೆಯಲ್ಲೇ ಕೊಡೆ ಹಿಡಿದು ಸಾಗಿದ ಜನ</p></div>

ವಿಧಾನಸೌಧ ಮೆಟ್ರೊ ನಿಲ್ದಾಣದ ಬಳಿ ಸೋಮವಾರ ಸುರಿದ ಮಳೆಯಲ್ಲೇ ಕೊಡೆ ಹಿಡಿದು ಸಾಗಿದ ಜನ

   

–ಪ್ರಜಾವಾಣಿ ಚಿತ್ರ/ರಂಜು ಪಿ

ಬೆಂಗಳೂರು: ನಗರದ ಮೇಲ್ಸೇತುವೆ ಹಾಗೂ ಅಂಡರ್‌ಪಾಸ್‌ಗಳಲ್ಲಿ ಮಳೆನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. 15 ದಿನಗಳಿಂದ ಸ್ವಚ್ಛತಾ ಕಾರ್ಯ ಕೈಗೊಂಡಿರುವುದಾಗಿ ಬಿಬಿಎಂಪಿ ಹೇಳಿದ್ದರೂ ಇಲ್ಲೆಲ್ಲ ಮಣ್ಣು ತುಂಬಿಕೊಂಡಿತ್ತು. ನೀರು ಹರಿಯದೆ ನಿಂತುಕೊಂಡಿತ್ತು.

ADVERTISEMENT

ಸಿರ್ಸಿ ಮೇಲ್ಸೇತುವೆ, ನಾಯಂಡಹಳ್ಳಿ ಮೇಲ್ಸೇತುವೆ, ರಾಜಾಜಿನಗರ ಕಾರಿಡಾರ್‌, ಓಕಳಿಪುರ, ಆನಂದರಾವ್‌ ವೃತ್ತ, ಕಾವೇರಿ ಜಂಕ್ಷನ್‌, ಲಿಂಗರಾಜಪುರ ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು, ಜನರು ಪರದಾಡಿದರು.

‘ಯಾವ ಸಮಸ್ಯೆ ಇಲ್ಲ ಎಂದು ಬಿಬಿಎಂಪಿ ಪ್ರಕಟಣೆ ಹೇಳುತ್ತದೆ. ಆದರೆ, ಮೇಲ್ಸೇತುವೆ, ಅಂಡರ್‌ಪಾಸ್‌ಗಳಲ್ಲಿ ನೀರು ನಿಂತಿರುವುದು ಮಾತ್ರ ಅವರ ಕಣ್ಣಿಗೆ ಬೀಳುವುದೇ ಇಲ್ಲ. ಎ.ಸಿ ಕಚೇರಿಗಳಲ್ಲಿ ಕುಳಿತು ಅಧಿಕಾರಿಗಳು ಮಾತನಾಡುವುದನ್ನು ಮೊದಲು ಬಿಡಬೇಕು’ ಎಂದು ಓಕಳಿಪುರದ ಅಂಡರ್‌ಪಾಸ್‌ ನೀರಿನಲ್ಲಿ ಸಿಲುಕಿಕೊಂಡಿದ್ದಿ ರಾಮರಾಜು ದೂರಿದರು.

ಸೋಮವಾರ ಸುರಿದ ಮಳೆಯಲ್ಲೇ ಬೈಕ್‌ ಸವಾರಿ

ಕೆ.ಆರ್. ರಸ್ತೆಯಲ್ಲಿ ಸೋಮವಾರ ಕುಟುಂಬವೊಂದು ಮಳೆಯಲ್ಲೇ ಸಾಗಿದ್ದು ಹೀಗೆ.

ಸೋಮವಾರ ಸುರಿದ ಮಳೆಯಲ್ಲೇ ಸಾಗಿದ ವಾಹನ ಸವಾರರು .

ಶಂಕರಮಠ ಬಳಿಯ ಕಾರ್ಡ್‌ ರಸ್ತೆಯಲ್ಲಿ ಮರದ ಕೊಂಬೆಯೊಂದು ಬಿದ್ದು ಕಾರು ಜಖಂಗೊಂಡಿತು 

ಬಿಬಿಎಂಪಿ ಮೇಲೆ ಆಕ್ರೋಶ!

ನಗರದ ಮೇಲ್ಸೇತುವೆ ಹಾಗೂ ಅಂಡರ್‌ಪಾಸ್‌ಗಳಲ್ಲಿ ಮಳೆನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. 15 ದಿನಗಳಿಂದ ಸ್ವಚ್ಛತಾ ಕಾರ್ಯ ಕೈಗೊಂಡಿರುವುದಾಗಿ ಬಿಬಿಎಂಪಿ ಹೇಳಿದ್ದರೂ ಇಲ್ಲೆಲ್ಲ ಮಣ್ಣು ತುಂಬಿಕೊಂಡಿತ್ತು. ನೀರು ಹರಿಯದೆ ನಿಂತುಕೊಂಡಿತ್ತು. ಸಿರ್ಸಿ ಮೇಲ್ಸೇತುವೆ ನಾಯಂಡಹಳ್ಳಿ ಮೇಲ್ಸೇತುವೆ ರಾಜಾಜಿನಗರ ಕಾರಿಡಾರ್‌ ಓಕಳಿಪುರ ಆನಂದರಾವ್‌ ವೃತ್ತ ಕಾವೇರಿ ಜಂಕ್ಷನ್‌ ಲಿಂಗರಾಜಪುರ ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು ಜನರು ಪರದಾಡಿದರು. ‘ಯಾವ ಸಮಸ್ಯೆ ಇಲ್ಲ ಎಂದು ಬಿಬಿಎಂಪಿ ಪ್ರಕಟಣೆ ಹೇಳುತ್ತದೆ. ಆದರೆ ಮೇಲ್ಸೇತುವೆ ಅಂಡರ್‌ಪಾಸ್‌ಗಳಲ್ಲಿ ನೀರು ನಿಂತಿರುವುದು ಮಾತ್ರ ಅವರ ಕಣ್ಣಿಗೆ ಬೀಳುವುದೇ ಇಲ್ಲ. ಎ.ಸಿ ಕಚೇರಿಗಳಲ್ಲಿ ಕುಳಿತು ಅಧಿಕಾರಿಗಳು ಮಾತನಾಡುವುದನ್ನು ಮೊದಲು ಬಿಡಬೇಕು’ ಎಂದು ಓಕಳಿಪುರದ ಅಂಡರ್‌ಪಾಸ್‌ ನೀರಿನಲ್ಲಿ ಸಿಲುಕಿಕೊಂಡಿದ್ದಿ ರಾಮರಾಜು ದೂರಿದರು.

ಎಲ್ಲಿ ಅತಿಹೆಚ್ಚು ಮಳೆ?

ರಾಜಮಹಲ್‌ ಗುಟ್ಟಹಳ್ಳಿ; 4 ಸೆಂ.ಮೀ

ದಯಾನಂದನಗರ; 3.2 ಸೆಂ.ಮೀ

ವಿದ್ಯಾಪೀಠ; 3.05 ಸೆಂ.ಮೀ

ಕೊಟ್ಟಿಗೆಪಾಳ್ಯ; 2.7 ಸೆಂ.ಮೀ

ಬಾಣಸವಾಡಿ; 2.5 ಸೆಂ.ಮೀ

ಕಾಟನ್‌ಪೇಟೆ; 2.25 ಸೆಂ.ಮೀ

ರಾಜಾಜಿನಗರ; 2.2 ಸೆಂ.ಮೀ

ಗೊಟ್ಟಿಗೆರೆ; 2 ಸೆಂ.ಮೀ

ಕುಶಾಲನಗರ; 1.9 ಸೆಂ.ಮೀ

ಕಮ್ಮನಹಳ್ಳಿ; 1.8 ಸೆಂ.ಮೀ

ಪುಲಕೇಶಿನಗರ; 1.75 ಸೆಂ.ಮೀ

ನಾಗಪುರ; 1.65 ಸೆಂ.ಮೀ

ಕೊಡಿಗೆಹಳ್ಳಿ; 1.6 ಸೆಂ.ಮೀ

ಬಸವನಪುರ; 1.5 ಸೆಂ.ಮೀ

ಮಾರುತಿಮಂದಿರ; 1.3 ಸೆಂ.ಮೀ

ಹೊರಮಾವು; 1.25 ಸೆಂ.ಮೀ

ಚಾಮರಾಜಪೇಟೆ; 1.25 ಸೆಂ.ಮೀ

ಬೊಮ್ಮನಹಳ್ಳಿ; 1.1 ಸೆಂ.ಮೀ

ನಾಯಂಡಹಳ್ಳಿ; 1 ಸೆಂ.ಮೀ

ಉರುಳಿದ ಮರ, ಜಾಹೀರಾತು ಫಲಕ

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಮತ್ತು ತಾಲ್ಲೂಕಿನಾದ್ಯಂತ ಸಂಜೆ ನಾಲ್ಕು ಗಂಟೆ ವೇಳೆಗೆ ಅರ್ಧ ತಾಸು ಗುಡುಗು ಸಹಿತ ಸಾಧಾರಣ ಮಳೆ ಸುರಿಯಿತು. 

ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣ ಇತ್ತು. ಕೆಲವೆಡೆ ಕೇವಲ ಗುಡುಗಿನ ಶಬ್ದ ಮಾತ್ರ ಕೇಳಿತು. ಮಳೆ ಸುರಿಯಲಿಲ್ಲ. ಕೆಲವೇ ನಿಮಿಷ ಬಿದ್ದ ಮಳೆ ಮತ್ತು ತಂಗಾಳಿ ಜನರಿಗೆ ನೆಮ್ಮದಿ ತಂದಿವೆ.

ಆನೇಕಲ್ ತಾಲ್ಲೂಕಿನಲ್ಲಿ ಬಿರುಗಾಳಿ ಮಳೆಗೆ ಅನೇಕ ಬೃಹತ್‌ ಮರಗಳು ನೆಲಕ್ಕೆ ಉರುಳಿವೆ. ಸಂಜೆ ಶುರುವಾದ ಮಳೆ ತಾಸಿಗೂ ಹೆಚ್ಚು ಸುರಿಯಿತು. ರಸ್ತೆಗಳಲ್ಲಿ ನೀರು ಹರಿಯಿತು.

ಚಂದಾಪುರದಲ್ಲಿ ಗಾಳಿ, ಮಳೆಗೆ ಭಾರಿ ಗಾತ್ರದ ಜಾಹೀರಾತು ಫಲಕಗಳು ಉರುಳಿ ಬಿದ್ದಿವೆ. ಗೆರಟಿಗನಬೆಲೆ ಬಳಿ ರಸ್ತೆಯಲ್ಲಿ ಮರ ಉರುಳಿ ಬಿದ್ದಿದೆ. ತಿಮ್ಮಸಂದ್ರ ಗೇಟ್‌ ಬಳಿ  ರಸ್ತೆಯಿಂದ ನೀರು ಹರಿದು ಹೋಗಲು ದಾರಿ ಇಲ್ಲದ ಕಾರಣ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

ಶಿಡ್ಲಘಟ್ಟ, ರಾಮನಗರ ಮತ್ತು ಮಾಗಡಿ ತಾಲ್ಲೂಕಿನಲ್ಲಿ ಹಲವೆಡೆ ಗುಡುಗು, ಗಾಳಿ ಆರ್ಭಟ ಭಾರಿ ಇತ್ತಾದರೂ ಮಳೆ ಮಾತ್ರ ಸಾಧಾರಣವಾಗಿ ಆಗಿದೆ.

ಬಿರುಗಾಳಿ ಆರ್ಭಟ: ತಂಪೆರೆದ ಆಲಿಕಲ್ಲು ಮಳೆ

ಕೋಲಾರ: ಜಿಲ್ಲೆಯ ಹಲವೆಡೆ ಸೋಮವಾರ ಗುಡುಗು, ಬಿರುಗಾಳಿ‌‌ ಸಹಿತ ಜೋರಾದ ಮಳೆಯಾಗಿದೆ. ಕೆಲವೆಡೆ ಮಳೆ ಜೊತೆ ಆಲಿಕಲ್ಲು ಸುರಿದಿವೆ.  

ಮಧ್ಯಾಹ್ನ ಮೂರೂವರೆಗೆ ಜೋರು ಗಾಳಿ ಬೀಸಲಾರಂಭಿಸಿದ ಕೆಲವೇ ನಿಮಿಷಗಳಲ್ಲಿ ಗುಡುಗು ಶುರುವಾಯಿತು. ಜೊತೆಗೆ ಧಾರಾಕಾರ ಮಳೆಯೂ ಬಂತು. ಕೆಲವೆಡೆ ಆಲಿಕಲ್ಲು ಸಮೇತ ಮಳೆಯಾಗಿದೆ. ನಾನಾ ಕಡೆ ಮರಗಳು ಹಾಗೂ ವಿದ್ಯುತ್ ಕಂಬ ಮುರಿದು ಬಿದ್ದಿವೆ. ಹಲವು ಮನೆಗಳ ಚಾವಣಿಗೆ ಅಳವಡಿಸಿದ್ದ ತಗಡಿನ ಶೀಟ್‌ ಗಾಳಿಗೆ ಹಾರಿ ಹೋಗಿವೆ.

ಒಳಚರಂಡಿ ನೀರು ರಸ್ತೆ ಮೇಲೆ ಉಕ್ಕಿ ಹರಿಯಿತು. ವಿದ್ಯುತ್ ಕಂಬ ಮುರಿದು ಬಿದ್ದ ಪರಿಣಾಮ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು.ಸಂಜೆ ವೇಳೆಯಾಗಿದ್ದರಿಂದ ಕೆಲಸ ಮುಗಿಸಿ ಮನೆಗೆ ತೆರಳುವವರು ಪರದಾಡು ವಂತಾಯಿತು. 

ಮಧ್ಯಾಹ್ನ 2 ಗಂಟೆವರೆಗೆ ಹೊರಗಡೆ ಕಾಲಿಡಲಾಗದ ಭಾರಿ ಬಿಸಿಲ ಧಗೆ ಇತ್ತು. ಕಳೆದ ಕೆಲ ದಿನಗಳಿಂದ ಜಿಲ್ಲೆಯ ತಾಪಮಾನ ದಾಖಲೆಯ 43.5 ಡಿಗ್ರಿ ಸೆಲ್ಸಿಯಸ್ ವರೆಗೆ ತಲುಪಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.