ADVERTISEMENT

Bengaluru Rains: ಬೆಂಗಳೂರಿನ ಹಲವೆಡೆ ಮಳೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 16:29 IST
Last Updated 21 ಜುಲೈ 2024, 16:29 IST
<div class="paragraphs"><p>ಬೆಂಗಳೂರಿನ ಪುರಭವನದ ಬಳಿ ಭಾನುವಾರ ಸುರಿದ ಬಿರುಸಿನ ಮಳೆಯಲ್ಲೇ ವಾಹನಗಳು ಸಾಗಿದವು </p></div>

ಬೆಂಗಳೂರಿನ ಪುರಭವನದ ಬಳಿ ಭಾನುವಾರ ಸುರಿದ ಬಿರುಸಿನ ಮಳೆಯಲ್ಲೇ ವಾಹನಗಳು ಸಾಗಿದವು

   

ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.

ಬೆಂಗಳೂರು: ನಗರದ ಹಲವೆಡೆ ಭಾನುವಾರ ಮಳೆಯಾಯಿತು. ಹಲವೆಡೆ ಚರಂಡಿ ವ್ಯವಸ್ಥೆ ಸರಿ ಇಲ್ಲದೇ ನೀರು ರಸ್ತೆಯಲ್ಲೇ ಹರಿಯಿತು.

ADVERTISEMENT

ದೊಡ್ಡನೆಕುಂದಿ, ಕೆ.ಆರ್‌.ಪುರ, ಎಂ.ಜಿ. ರಸ್ತೆ, ರಾಜಾಜಿನಗರ, ಸುಬ್ರಹ್ಮಣ್ಯನಗರ, ಯಶವಂತಪುರ, ಪೀಣ್ಯ, ಹೆಬ್ಬಾಳ, ಕೆಂಗೇರಿ, ಪದ್ಮನಾಭನಗರ, ನಾಯಂಡಹಳ್ಳಿ, ಮೆಜೆಸ್ಟಿಕ್‌, ಯಲಹಂಕ, ಜಯನಗರ, ಶಿವಾಜಿನಗರ, ಹಂಪಿನಗರ, ಕೋರಮಂಗಲ, ಜ್ಞಾನಭಾರತಿ, ವಿಶ್ವೇಶ್ವರಪುರ, ವಿಜಯನಗರ, ಬನಶಂಕರಿ ಸಹಿತ ನಗರದ ವಿವಿಧೆಡೆ ಮಧ್ಯಾಹ್ನದ ವೇಳೆಗೆ ಮಳೆ ಸುರಿಯಿತು.

ಮಾರತ್ತಹಳ್ಳಿ, ಹೆಬ್ಬಾಳ ಸರ್ಕಲ್‌, ಕ್ವೀನ್ಸ್‌ ರಸ್ತೆ, ವೀರಣ್ಣ ಪಾಳ್ಯ, ಪ್ಯಾಲೆಸ್‌ ಕ್ರಾಸ್‌ ಇನ್ನಿತರ ಪ್ರದೇಶಗಳಲ್ಲಿ ರಸ್ತೆಯಲ್ಲಿ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ತೊಡಕು ಉಂಟಾಯಿತು.–ಪ್ರಜಾವಾಣಿ ಚಿತ್ರ/ ಪುಷ್ಕರ್‌ ವಿ. 

ಬೆಂಗಳೂರಿನ ಪುರಭವನದ ಬಳಿ ಭಾನುವಾರ ಬಿರುಸಿನಿಂದ ಮಳೆ ಸುರಿಯಿತು.

ಮಳೆಯಿಂದ ರಕ್ಷಿಸಿಕೊಳ್ಳಲು ಜನರು ರೈನ್‌ಕೋಟ್‌ ಖರೀದಿಯಲ್ಲಿ ತೊಡಕೊಂಡಿರುವುದು ಭಾನುವಾರ ಕಂಡು ಬಂತು.

ಕೆ.ಆರ್‌. ಮಾರುಕಟ್ಟೆಯಲ್ಲಿ ಮಳೆಯ ಮಧ್ಯೆಯೇ ಜನಸಂಚಾರ ವಾಹನ ಸಂಚಾರ ನಿರಂತರವಾಗಿತ್ತು.

ನಗರದ ಕ್ವೀನ್ಸ್‌ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಡಕುಂಟಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.