ADVERTISEMENT

ಬೆಂಗಳೂರು: ನಗರದ ಹಲವೆಡೆ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 23:30 IST
Last Updated 21 ಜೂನ್ 2024, 23:30 IST
<div class="paragraphs"><p>ನಗರದ ಬಿ.ವಿ.ಕೆ. ಅಯ್ಯಂಗಾರ್ ರಸ್ತೆಯಲ್ಲಿ ಮಳೆಯಲ್ಲಿ ಛತ್ರಿ ಹಿಡಿದುಕೊಂಡು ಸಾಗಿದ ಮಹಿಳೆಯರು&nbsp;</p></div>

ನಗರದ ಬಿ.ವಿ.ಕೆ. ಅಯ್ಯಂಗಾರ್ ರಸ್ತೆಯಲ್ಲಿ ಮಳೆಯಲ್ಲಿ ಛತ್ರಿ ಹಿಡಿದುಕೊಂಡು ಸಾಗಿದ ಮಹಿಳೆಯರು 

   

–ಪ್ರಜಾವಾಣಿ ಚಿತ್ರ/ ಕಿಶೋರ್ ಕುಮಾರ್ ಬೋಳಾರ್

ಬೆಂಗಳೂರು: ನಗರದ ಹಲವು ಪ್ರದೇಶಗಳಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದೆ.

ADVERTISEMENT

ಕಾಮಾಕ್ಷಿಪಾಳ್ಯ ಒಂದನೇ ಮುಖ್ಯ ರಸ್ತೆಯಲ್ಲಿ ಮಳೆನೀರಿನ ಜೊತೆ ಒಳಚರಂಡಿ ನೀರು ಸೋರಿಕೆಯಿಂದ ಸುಮನಹಳ್ಳಿ ಮೇಲ್ಸೇತುವೆ ಹಾಗೂ ಕೆಳಭಾಗದಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

ನಾಯಂಡಹಳ್ಳಿ, ರಾಜರಾಜೇಶ್ವರಿನಗರ, ಜ್ಞಾನಭಾರತಿ, ವಿದ್ಯಾರಣ್ಯಪುರ, ಕೆಂಗೇರಿ, ಜಕ್ಕೂರು ಹಾಗೂ ಹೆಮ್ಮಿಗೆ ಪುರದಲ್ಲಿ ಒಂದು ಸೆಂ.ಮೀಗೂ ಹೆಚ್ಚಿನ ಮಳೆಯಾಗಿದೆ.

ಮಾರುತಿ ಮಂದಿರ, ಹಂಪಿನಗರ, ವಿದ್ಯಾಪೀಠ, ವಿಶ್ವೇಶ್ವರಪುರಂ, ಬಿಳೇಕಹಳ್ಳಿ, ಕೋಣನಕುಂಟೆ, ಗೊಟ್ಟಿಗೆರೆ, ಸಿಂಗಸಂದ್ರ, ಕಾಡುಗೋಡಿ, ಹಗದೂರು, ಯಲಹಂಕ, ಶೆಟ್ಟಿಹಳ್ಳಿ, ಕೊಡಿಗೆಹಳ್ಳಿಯಲ್ಲಿ ಉತ್ತಮ ಮಳೆಯಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.