ಬೆಂಗಳೂರು: ‘ನಗರದಲ್ಲಿ 53 ಕೆಳ ಸೇತುವೆಗಳಿದ್ದು, ಅವುಗಳ ಪೈಕಿ 18 ಕೆಳ ಸೇತುವೆಗಳ ಸ್ಥಿತಿಗತಿ ಮೌಲ್ಯಮಾಪನ ಮಾಡಿಸಲಾಗುತ್ತಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ನೀರು ಸರಾಗವಾಗಿ ಹರಿದು ಹೋಗುತ್ತಿದೆಯೇ ಎಂಬುದನ್ನು ಪರಿಶೀಲಿಸಿ ತೊಂದರೆ ಇದ್ದರೆ ವಾಹನ ಸಂಚಾರ ಬಂದ್ ಮಾಡಿ ದುರಸ್ತಿಪಡಿಸಲಾಗುವುದು ಎಂದು ಸುದ್ದಿಗಾರರಿಗೆ ವಿವರಿಸಿದರು.
50 ಮಿಲಿ ಮೀಟರ್ ಮಳೆ 45 ನಿಮಿಷದಲ್ಲಿ ಸುರಿದ್ದರಿಂದ ನೀರಿನ ಹರಿವು ಹೆಚ್ಚಾಯಿತು. ಮತ್ತೆ ಈ ರೀತಿಯ ಘಟನೆ ಸಂಭವಿಸದಂತೆ ಪರಿಹಾರ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.
ರಾಜಕಾಲುವೆ ಒತ್ತುವರಿ ತೆರವು ಕಾರ್ಯವೂ ನಡೆಯುತ್ತಿದೆ. 607 ಕಡೆ ಒತ್ತುವರಿಯಾಗಿದ್ದು, 108 ಕಡೆ ತೆರವಿಗೆ ನ್ಯಾಯಾಲಯದ ತಡೆ ಇದೆ. ಉಳಿದ ಕಡೆಗಳಲ್ಲಿ ಕಾರ್ಯಾಚರಣೆ ಮುಂದುವರಿದಿದೆ ಎಂದು ಹೇಳಿದರು.
ವಿದ್ಯಾರಣ್ಯಪುರದಲ್ಲಿ ವಾಲಿರುವ ಕಟ್ಟಡದಿಂದ ಅಕ್ಕ–ಪಕ್ಕದ ಕಟ್ಟಡಗಳಿಗೆ ತೊಂದರೆಯಾಗಿದ್ದು, ತೆರವುಗೊಳಿಸಲಾಗುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.