ADVERTISEMENT

Bengaluru Rains | ಕಿತ್ತಗನೂರು: 60ಕ್ಕೂ ಹೆಚ್ಚು ಮನೆಗಳು ಜಲಾವೃತ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 0:00 IST
Last Updated 24 ಅಕ್ಟೋಬರ್ 2024, 0:00 IST
ಗ್ರೀನ್ ಗಾರ್ಡನ್ ಬಡಾವಣೆಯ ನಿವಾಸಿಗಳನ್ನು ಅಗ್ನಿಶಾಮಕ ಸಿಬ್ಬಂದಿ ಬೋಟ್ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು
ಗ್ರೀನ್ ಗಾರ್ಡನ್ ಬಡಾವಣೆಯ ನಿವಾಸಿಗಳನ್ನು ಅಗ್ನಿಶಾಮಕ ಸಿಬ್ಬಂದಿ ಬೋಟ್ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು   

ಕೆ.ಆರ್.ಪುರ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಹದೇವಪುರ ಕ್ಷೇತ್ರದ ಕಿತ್ತಗನೂರಿನ ಗ್ರೀನ್ ಗಾರ್ಡನ್ ಮತ್ತು ಸಿಗ್ನೆಚರ್ ಬಡಾವಣೆಯ 60 ಹೆಚ್ಚು ಮನೆಗಳು ಜಲಾವೃತಗೊಂಡಿವೆ.

ಕಿತ್ತಗನೂರು ಮೂಲಕ ಬಿದರಹಳ್ಳಿ ಕಡೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಗೆ ಸೇತುವೆ ನಿರ್ಮಾಣ ಮಾಡದಿರುವುದಿಂದ, ರಾಂಪುರ ಕೆರೆಯಿಂದ ಎಲೆಮಲ್ಲಪ್ಪಶೆಟ್ಟಿ ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯ ನೀರು ಬಡಾವಣೆಯ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

ಮೂರು ದಿನಗಳಿಂದಲೂ ಜಲದಿಗ್ಬಂಧನಕ್ಕೆ ಒಳಗಾಗಿದ್ದ ಗ್ರೀನ್ ಗಾರ್ಡನ್ ಮತ್ತು ಸಿಗ್ನೇಚರ್ ಬಡಾವಣೆಯ ನಿವಾಸಿಗಳು ಮನೆಯಿಂದ ಹೊರಬರಲಾಗದೇ, ಆಹಾರ, ನೀರು ಇಲ್ಲದೆ ಪರದಾಡಿದರು.

ADVERTISEMENT

‘ಪ್ರತಿ ವರ್ಷ ಸಮಸ್ಯೆ ಆಗುತ್ತಿದೆ. ಮೂರು ದಿನಗಳಿಂದಲೂ ರಾಜಕಾಲುವೆ ನೀರು ಬಡಾವಣೆಗಳಿಗೆ ನುಗ್ಗಿದ್ದರಿಂದ ತೊಂದರೆ ಅನುಭವಿಸಿದ್ದೇವೆ. ಮನೆಗಳಿಗೆ ವಿಷ ಜಂತುಗಳು ಸೇರಿವೆ. ಆಹಾರ, ನೀರು ಇಲ್ಲದೆ ತೊಂದರೆ ಅನುಭವಿಸಿದ್ದೇವೆ’ ಎಂದು ಬಡಾವಣೆ ನಿವಾಸಿ ದಕ್ಷಾ ಹೇಳಿದರು.

ಸಿಗ್ನೇಚರ್ ಬಡಾವಣೆ ಜಲವೃತಗೊಂಡಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.