ಬೆಂಗಳೂರು: ಸೌಥ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್‌ನಿಂದ ಜುಲೈ 30ರಿಂದ ಆಗಸ್ಟ್ 1ರವರೆಗೆ ಬಳ್ಳಾರಿ ರಸ್ತೆಯ ಅರಮನೆ ಮೈದಾನದ ಪ್ರಿನ್ಸೆಸ್ ಶ್ರೈನ್ ಆವರಣದಲ್ಲಿ ಮೂರು ದಿನಗಳ ಸಿದ್ಧ ಉಡುಪುಗಳ ರಾಷ್ಟ್ರಮಟ್ಟದ ಮೇಳ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಅನುರಾಗ್ ಸಿಂಘ್ಲಾ, ‘ಮೇಳದಲ್ಲಿ ಮಹಿಳೆಯರು, ಪುರುಷರು ಮತ್ತು ಮಕ್ಕಳ 150ಕ್ಕೂ ಹೆಚ್ಚು ಹೊಸ ಬ್ರ್ಯಾಂಡ್‌ಗಳ ಉಡುಪುಗಳನ್ನು ಪ್ರದರ್ಶಿಸಲಾಗುವುದು. ಹೊಸ ವಿನ್ಯಾಸಗಳು, ಮದುವೆ, ಸಾಂಪ್ರದಾಯಿಕ ಉಡುಗೆ–ತೊಡುಗೆ, ಔಪಚಾರಿಕ, ಅನೌಪಚಾರಿಕ ಬಟ್ಟೆಗಳು, ಚಳಿಗಾಲದ ಉಡುಪುಗಳ ಪ್ರದರ್ಶನವೂ ಇರಲಿದೆ’ ಎಂದರು.
‘ಸೂರತ್, ಜೈಪುರ, ದೆಹಲಿ, ಅಹಮದಾಬಾದ್, ನಾಗಪುರ ಸೇರಿದಂತೆ ಪ್ರಮುಖ ನಗರಗಳಿಂದ 100ಕ್ಕೂ ಹೆಚ್ಚು ಜವಳಿ ಉತ್ಪಾದಕರು ಮೇಳದಲ್ಲಿ ಭಾಗವಹಿಸಲಿದ್ದಾರೆ. ₹100 ಕೋಟಿಗೂ ಹೆಚ್ಚು ವಹಿವಾಟು ನಡೆಯಬಹುದು ಎಂಬುದಾಗಿ ಅಂದಾಜಿಸಲಾಗಿದೆ’ ಎಂದು
ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.