ADVERTISEMENT

ವಿಧಾನ ಪರಿಷತ್‌ ಶಿಕ್ಷಕರ ಕ್ಷೇತ್ರ: ಪುಟ್ಟಣ್ಣಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2024, 12:49 IST
Last Updated 20 ಫೆಬ್ರುವರಿ 2024, 12:49 IST
<div class="paragraphs"><p>ಪುಟ್ಟಣ್ಣ</p></div>

ಪುಟ್ಟಣ್ಣ

   

ಬೆಂಗಳೂರು: ವಿಧಾನ ಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪುಟ್ಟಣ್ಣ ಗೆಲುವು ಸಾಧಿಸಿದ್ದಾರೆ. ಶಿಕ್ಷಕರೇ ಮತದಾರರಾಗಿರುವ ಈ ಚುನಾವಣೆಯಲ್ಲಿ, ಚಲಾಯಿತ 16,541 ಮತಗಳ ಪೈಕಿ 1,239 ಮತಗಳು ತಿರಸ್ಕೃತವಾಗಿವೆ.

ಬಿಜೆಪಿ– ಜೆಡಿಎಸ್‌ ಜಂಟಿಯಾಗಿ ಈ ಚುನಾವಣೆ ಎದುರಿಸಿದ್ದು, ಮೈತ್ರಿ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಮೈತ್ರಿಕೂಟಕ್ಕೆ ಸೋಲಾಗಿದೆ. ಎ.ಪಿ. ರಂಗನಾಥ್‌ ಅವರನ್ನು 1,507 ಮತಗಳ ಅಂತರದಿಂದ ಪುಟ್ಟಣ್ಣ ಸೋಲಿಸಿದ್ದಾರೆ.

ADVERTISEMENT

ಪುಟ್ಟಣ್ಣ 8,260 ಮತಗಳನ್ನು ಪಡೆದರೆ, ರಂಗನಾಥ್‌ 6,753 ಮತಗಳನ್ನು ಗಳಿಸಿದ್ದಾರೆ. ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪ ಚುನಾವಣೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆ ವ್ಯಾಪ್ತಿಯ ಮತದಾರರು ಫೆ.16ರಂದು ಮತದಾನ ಮಾಡಿದ್ದರು. 

ಹಿಂದೆ ಇದೇ ಕ್ಷೇತ್ರದಿಂದ ಬಿಜೆಪಿಯಿಂದ ಆಯ್ಕೆಯಾಗಿದ್ದ ಪುಟ್ಟಣ್ಣ ಅವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ 2022ರ ಮಾರ್ಚ್‌ನಲ್ಲಿ ರಾಜೀನಾಮೆ ನೀಡಿದ್ದರು. ರಾಜಾಜಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಪುಟ್ಟಣ್ಣ ರಾಜೀನಾಮೆಯಿಂದ ಖಾಲಿಯಾಗಿದ್ದ ಬೆಂಗಳೂರು ಶಿಕ್ಷಕರ ವಿಧಾನ ಪರಿಷತ್‌ ಕ್ಷೇತ್ರಕ್ಕೆ ಫೆ.16ರಂದು ಉಪ ಚುನಾವಣೆ ನಡೆದಿತ್ತು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪುಟ್ಟಣ್ಣ ಇದೀಗ ಮತ್ತೆ ಗೆಲುವು ಸಾಧಿಸಿದ್ದು, ಈ ಸ್ಥಾನದ ಅವಧಿ 2026 ನವೆಂಬರ್ 11ರವರೆಗಿದೆ.

2002ರಿಂದ ನಿರಂತರವಾಗಿ ಜೆಡಿಎಸ್‌ನಿಂದ ಮೂರು ಬಾರಿ, ಬಿಜೆಪಿಯಿಂದ ಒಂದು ಬಾರಿ ಹಾಗೂ ಈಗ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಪುಟ್ಟಣ್ಣ ಗೆದ್ದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.