ಬೆಂಗಳೂರು: ನಗರದಲ್ಲಿ ಜನವರಿಯಿಂದ ಜುಲೈವರೆಗೆ ಸಂಚಾರ ನಿಯಮ ಉಲ್ಲಂಘಿಸಿದ 53.62 ಲಕ್ಷ ಪ್ರಕರಣಗಳು ದಾಖಲಾಗಿದ್ದು, ವಿವಿಧ ಪ್ರಕಾರಗಳ ವಾಹನಗಳಿಗೆ ₹35.38 ಕೋಟಿ ದಂಡ ವಿಧಿಸಲಾಗಿದೆ.
ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕೈಗೊಂಡ ಕ್ರಮದ ಅಂಕಿ–ಅಂಶವನ್ನು ಸಂಚಾರ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಏಳು ತಿಂಗಳಲ್ಲಿ ಏಪ್ರಿಲ್‌ನಲ್ಲಿ ಪ್ರಕರಣಗಳ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಜನವರಿಯಲ್ಲಿ 8.47 ಲಕ್ಷ, ಫೆಬ್ರುವರಿಯಲ್ಲಿ 7.79 ಲಕ್ಷ, ಮಾರ್ಚ್‌ನಲ್ಲಿ 7.43 ಲಕ್ಷ, ಏಪ್ರಿಲ್‌ನಲ್ಲಿ 6.90 ಲಕ್ಷ, ಮೇ ತಿಂಗಳಲ್ಲಿ 8.49 ಲಕ್ಷ, ಜೂನ್‌ನಲ್ಲಿ 6.96 ಲಕ್ಷ ಹಾಗೂ ಜುಲೈನಲ್ಲಿ 7.53 ಲಕ್ಷ ಪ್ರಕರಣಗಳು ದಾಖಲಾಗಿವೆ.
ಸಂಚಾರ ನಿಯಮ ಉಲ್ಲಂಘನೆ ಪತ್ತೆಗಾಗಿ ನಗರದ ಹಲವು ಕಡೆಗಳಲ್ಲಿ ಸಿ.ಸಿ ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇವುಗಳು ಕ್ಲಿಕ್ಕಿಸುವ ಫೋಟೊ ಆಧರಿಸಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ. ಹಲವರ ಮೊಬೈಲ್‌ಗಳಿಗೆ ಸಂದೇಶ ಕಳುಹಿಸಿ, ದಂಡ ಪಾವತಿಸುವಂತೆ ಪೊಲೀಸರು ಸೂಚನೆ ನೀಡುತ್ತಿದ್ದಾರೆ.
‘ಕಣ್ಣು ಕುಕ್ಕುವ ಎಲ್‌ಇಡಿ ದೀಪ ಅಳವಡಿಸಿಕೊಂಡ ವಾಹನಗಳ ವಿರುದ್ಧ ರಾಜ್ಯದಾದ್ಯಂತ ಜುಲೈನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ 28,620 ಪ್ರಕರಣಗಳನ್ನು ದಾಖಲಿಸಲಾಗಿದೆ. ಬೆಂಗಳೂರು ನಗರದಲ್ಲಿ 9,046 ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.
‘ಸಂಚಾರ ನಿಯಮ ಉಲ್ಲಂಘಿಸಿ ದಂಡ ಪಾವತಿಸದಿರುವವರನ್ನು ಪತ್ತೆಹಚ್ಚಿ ಅವರ ಮನೆಗೆ ಹೋಗಿ ದಂಡ ವಸೂಲಿ ಮಾಡುವ ಪ್ರಕ್ರಿಯೆ ಆರಂಭವಾಗಿದೆ’ ಎಂದು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ವರ್ಷ;ಒಟ್ಟು ಪ್ರಕರಣ(ಲಕ್ಷಗಳಲ್ಲಿ);ದಂಡ (ಕೋಟಿಗಳಲ್ಲಿ)
2019;79.87; ₹89.18
2020;84.06; ₹84.06
2021;93.58; ₹140.32
2022;104.66; ₹179.76
2023;90.00; ₹185.14
2024 (ಜುಲೈ 31ರವರೆಗೆ);53.62;₹35.38
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.