ADVERTISEMENT

Bengaluru Traffic | 11 ತಿಂಗಳಿನಲ್ಲಿ 96.27 ಲಕ್ಷ ಪ್ರಕರಣ, ₹174 ಕೋಟಿ ದಂಡ

ಸಂಚಾರ ನಿಯಮ ಉಲ್ಲಂಘನೆ ಹೆಚ್ಚಳ l 88.21 ಲಕ್ಷ ಪ್ರಕರಣ ದಾಖಲಿಸಿದ ಕ್ಯಾಮೆರಾಗಳು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2022, 22:00 IST
Last Updated 23 ಡಿಸೆಂಬರ್ 2022, 22:00 IST
ಎಎನ್‌ಪಿಆರ್ (ಸ್ವಯಂಪ್ರೇರಿತ ವಾಹನ ಸಂಖ್ಯೆ ಗುರುತಿಸುವ) ಕ್ಯಾಮೆರಾ ಮಾಹಿತಿ ಆಧರಿಸಿ ವಾಹನಗಳನ್ನು ತಡೆದು ದಂಡ ಸಂಗ್ರಹಿಸಿದ ಸಂಚಾರ ಪೊಲೀಸರು (ಸಂಗ್ರಹ ಚಿತ್ರ)
ಎಎನ್‌ಪಿಆರ್ (ಸ್ವಯಂಪ್ರೇರಿತ ವಾಹನ ಸಂಖ್ಯೆ ಗುರುತಿಸುವ) ಕ್ಯಾಮೆರಾ ಮಾಹಿತಿ ಆಧರಿಸಿ ವಾಹನಗಳನ್ನು ತಡೆದು ದಂಡ ಸಂಗ್ರಹಿಸಿದ ಸಂಚಾರ ಪೊಲೀಸರು (ಸಂಗ್ರಹ ಚಿತ್ರ)   

ನಗರದಲ್ಲಿ ವಾಹನಗಳ ನೋಂದಣಿ ಸಂಖ್ಯೆ ಹೆಚ್ಚಳದ ಜೊತೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಸಂಖ್ಯೆಯಲ್ಲೂ ಏರಿಕೆ ಕಂಡುಬರುತ್ತಿದೆ.

ಕಳೆದ ವರ್ಷಗಳಿಗೆ ಹೋಲಿಸಿದರೆ 2022ರಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ಹಾಗೂ ದಂಡದ ಪ್ರಮಾಣ ಹೆಚ್ಚಳವಾಗಿದೆ.

ನಗರದಲ್ಲಿ ಅಳವಡಿಸಿರುವ ಕ್ಯಾಮೆರಾಗಳ ಮೂಲಕವೇ ಶೇ 90ರಷ್ಟು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ADVERTISEMENT

ಎಎನ್‌ಪಿಆರ್ (ಸ್ವಯಂಪ್ರೇರಿತ ನೋಂದಣಿ ಸಂಖ್ಯೆ ಗುರುತಿಸುವ) ಕ್ಯಾಮೆರಾ ಮೂಲಕ ರಸ್ತೆಯಲ್ಲಿ ವಾಹನಗಳನ್ನು ಪತ್ತೆ ಮಾಡಿ ಪೊಲೀಸರು ದಂಡ ಸಂಗ್ರಹಿಸುತ್ತಿದ್ದಾರೆ.

2022ರ ಜನವರಿಯಿಂದ ನವೆಂಬರ್‌ವರೆಗಿನ ಸಂಚಾರ ನಿಯಮ ಉಲ್ಲಂಘನೆ, ದಂಡ ಸಂಗ್ರಹ ಸೇರಿದಂತೆ ಹಲವು ಮಾಹಿತಿಯನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಅದರ ಅಂಕಿ– ಅಂಶ ಇಲ್ಲಿವೆ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.