ADVERTISEMENT

ಬೆಂಗಳೂರು: ರಸ್ತೆ ಫಲಕದಲ್ಲಿ ಕನ್ನಡ ತಪ್ಪಾಗಿ ಬಳಕೆ; ಕರ್ನಾಟಕ ವಿಕಾಸರಂಗ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 23:07 IST
Last Updated 18 ಅಕ್ಟೋಬರ್ 2024, 23:07 IST
ರಸ್ತೆ ಫಲಕದಲ್ಲಿ ಕನ್ನಡವನ್ನು ತಪ್ಪಾಗಿ ಬಳಸಿರುವುದು
ರಸ್ತೆ ಫಲಕದಲ್ಲಿ ಕನ್ನಡವನ್ನು ತಪ್ಪಾಗಿ ಬಳಸಿರುವುದು   

ಬೆಂಗಳೂರು: ‘ನಗರದ ಹಲವು ರಸ್ತೆಗಳ ನಾಮಫಲಕಗಳಲ್ಲಿ ಕನ್ನಡವು ತಪ್ಪಾಗಿ ಬಳಕೆಯಾಗಿದೆ. ಬಿಬಿಎಂಪಿಯ ಈ ತಾತ್ಸಾರದಿಂದ ಕನ್ನಡ ಭಾಷೆಗೆ ಅಪಮಾನವಾಗುತ್ತಿದೆ’ ಎಂದು ಕರ್ನಾಟಕ ವಿಕಾಸ ರಂಗ ಅಸಮಾಧಾನ ವ್ಯಕ್ತಪಡಿಸಿದೆ.

ನಗರದ ವಿವಿಧೆಡೆಯ ನಾಮಫಲಕಗಳಲ್ಲಿ ಕನ್ನಡ, ಇಂಗ್ಲಿಷ್ ಪದಗಳನ್ನು ಬಳಸಲಾಗಿದೆ. ಕನ್ನಡವನ್ನು ಸಮರ್ಪಕವಾಗಿ ಬಳಸದ ಬಿಬಿಎಂಪಿ, ಕೆಲವೆಡೆ ಇಂಗ್ಲಿಷ್ ಪದಗಳಿಗೆ ಆದ್ಯತೆ ನೀಡಿದೆ. ಇನ್ನೂ ಕೆಲವು ಫಲಕಗಳಲ್ಲಿ ಒತ್ತಕ್ಷರಗಳು ಬಿಟ್ಟು ಹೋಗಿ, ಅಭಾಸವಾಗಿದೆ. ಆದ್ದರಿಂದ ರಸ್ತೆ ಫಲಕಗಳಲ್ಲಿ ಶುದ್ಧ ಕನ್ನಡ ಬಳಕೆಗೆ ಆದ್ಯತೆ ನೀಡಬೇಕು ಎಂದು ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ ಚನ್ನೇಗೌಡ ಆಗ್ರಹಿಸಿದ್ದಾರೆ.

‘ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭವನ್ನು ರಾಜಧಾನಿ ಬೆಂಗಳೂರಿನಲ್ಲಿಯೇ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ರಸ್ತೆ ಫಲಕ ಸೇರಿ ವಿವಿಧೆಡೆ ಕನ್ನಡಕ್ಕೆ ಸೂಕ್ತ ಆದ್ಯತೆ ನೀಡಬೇಕು. ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.