ADVERTISEMENT

ಮೆಟ್ರೊ ನೀಲಿ ಮಾರ್ಗದ ಕಾಮಗಾರಿ: ಸಿಲ್ಕ್‌ ಬೋರ್ಡ್‌ ಮೇಲ್ಸೇತುವೆ ಭಾಗಶಃ ಬಂದ್‌

2.5 ಮೀಟರ್‌ ರಸ್ತೆಯಲ್ಲಿ ನಾಲ್ಕು ತಿಂಗಳು ವಾಹನ ಸಂಚಾರ ಇಲ್ಲ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2023, 14:11 IST
Last Updated 21 ಅಕ್ಟೋಬರ್ 2023, 14:11 IST
<div class="paragraphs"><p>ಮೆಟ್ರೊ ಕಾಮಗಾರಿ ನಡೆಯುತ್ತಿರುವ ದೃಶ್ಯ</p></div>

ಮೆಟ್ರೊ ಕಾಮಗಾರಿ ನಡೆಯುತ್ತಿರುವ ದೃಶ್ಯ

   

ಬೆಂಗಳೂರು: ಮೆಟ್ರೊ ನೀಲಿ ಮಾರ್ಗದ ಕಾಮಗಾರಿಗಾಗಿ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಮೇಲ್ಸೇತುವೆಯನ್ನು (ಮಡಿವಾಳ ಬದಿ) ಭಾಗಶಃ ಬಂದ್‌ ಮಾಡಲಾಗಿದೆ.

ಶನಿವಾರದಿಂದ ನಾಲ್ಕು ತಿಂಗಳು ಕಾಮಗಾರಿ ನಡೆಯಲಿದ್ದು, ರಸ್ತೆಯ ಅರ್ಧ ಭಾಗ ಮುಚ್ಚಲಾಗಿದೆ. ಇದರಿಂದ ವಾಹನದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ.

ADVERTISEMENT

ಸಿಲ್ಕ್‌ಬೋರ್ಡ್‌ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ನಮ್ಮ ಮೆಟ್ರೊ (ನೀಲಿ ಮಾರ್ಗ) 2026ರ ಒಳಗೆ ಪೂರ್ಣಗೊಳಿಸಬೇಕು. ಹೀಗಾಗಿ, ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ಜಂಕ್ಷನ್ ಮೇಲ್ಸೇತುವೆಯ ಮೇಲೆ ಮತ್ತು ಕೆಳಗೆ ರ‍್ಯಾಂಪ್‌ ಕ್ಯಾರೇಜ್‌ ವೇ ಲೂಪ್‌ಗಳು ಮತ್ತು ರ‍್ಯಾಂಪ್‌ ಮೇಲ್ಸೇತುವೆ ಸ್ಟೇಜಿಂಗ್‌ ಕಾಮಗಾರಿಯನ್ನು ಬಿಎಂಆರ್‌ಸಿಎಲ್‌ ಕೈಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಮೇಲ್ಸೇತುವೆಯಲ್ಲಿ 2.5 ಮೀಟರ್‌ನಷ್ಟು ರಸ್ತೆಗೆ ಶನಿವಾರ ಬ್ಯಾರಿಕೇಡ್‌ ಅಳವಡಿಸಿದೆ.  ಮುಂದಿನ ನಾಲ್ಕು ತಿಂಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ವಾಹನಗಳ ಸಂಚಾರ ಹೆಚ್ಚಿರುವ ಈ ಮಾರ್ಗದಲ್ಲಿ ಮೆಟ್ರೊ ಕಾಮಗಾರಿಯಿಂದ ವಾಹನದಟ್ಟಣೆ ಇನ್ನಷ್ಟು ಹೆಚ್ಚಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಕಾಮಗಾರಿಯಿಂದ ಸಾರ್ವಜನಿಕರಿಗೆ ಉಂಟಾಗುವ ಅನನುಕೂಲಕ್ಕೆ ಬಿಎಂಆರ್‌ಸಿಎಲ್‌ ವಿಷಾದ ವ್ಯಕ್ತಪಡಿಸಿದ್ದು, ಸಾರ್ವಜನಿಕರ ಸಹಕಾರ ಕೋರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.