ADVERTISEMENT

ಬೆಸ್ಕಾಂ: ವಿದ್ಯುತ್ ದರ 9 ಪೈಸೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2024, 15:18 IST
Last Updated 30 ಜನವರಿ 2024, 15:18 IST
<div class="paragraphs"><p>ವಿದ್ಯುತ್</p></div>

ವಿದ್ಯುತ್

   

ಬೆಂಗಳೂರು: ಕಳೆದ ಡಿಸೆಂಬರ್‌ ತಿಂಗಳಲ್ಲಿ ಇಂಧನ ಮತ್ತು ವಿದ್ಯುತ್‌ ಖರೀದಿ ಹೊಂದಾಣಿಕೆ ವೆಚ್ಚ (ಎಫ್‌ಪಿಪಿಸಿಎ) ಇಳಿಕೆ ಆಗಿರುವುದರಿಂದ, ಗ್ರಾಹಕರಿಗೆ ಫೆಬ್ರುವರಿ ತಿಂಗಳಲ್ಲಿ ನೀಡುವ ವಿದ್ಯುತ್ ಬಿಲ್‌ನಲ್ಲಿ ಪ್ರತಿ ಯೂನಿಟ್‌ಗೆ 9 ಪೈಸೆ ಕಡಿತಗೊಳಿಸಲು ಬೆಸ್ಕಾಂ ನಿರ್ಧರಿಸಿದೆ.

ಕಳೆದ ತಿಂಗಳ ಬಿಲ್‌ನಲ್ಲೂ ಪ್ರತಿ ಯೂನಿಟ್‌ಗೆ 37 ಪೈಸೆ ಕಡಿತಗೊಳಿಸಿತ್ತು.

ADVERTISEMENT

‘ಗೃಹ ಜ್ಯೋತಿ’ ಯೋಜನೆಯಡಿ ಉಚಿತವಾಗಿ 200 ಯೂನಿಟ್‌ ಬಳಸುವ ಗ್ರಾಹಕರಿಗೆ ಇದರಿಂದ ಪ್ರಯೋಜನವಾಗುವುದಿಲ್ಲ. 200 ಯೂನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಸುವ ಗೃಹ ಹಾಗೂ ವಾಣಿಜ್ಯ ಬಳಕೆದಾರರಿಗೆ ಸ್ವಲ್ಪ ಅನುಕೂಲವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.