ಬೆಂಗಳೂರು: ಸಮತಾ ಸೈನಿಕ ದಳ (ಎಸ್‌ಎಸ್‌ಡಿ), ಭಾರತೀಯ ಬೌದ್ಧ ಮಹಾಸಭಾ ಹಾಗೂ ನಾಗಸೇನಾ ಬುದ್ಧ ವಿಹಾರ ಸಹಯೋಗದಲ್ಲಿ ಇದೇ 31ರಂದು ಭೀಮಾ ಕೊರೇಗಾಂವ್ ವಿಜಯೋತ್ಸವವನ್ನು ಸದಾಶಿವನಗರದಲ್ಲಿರುವ ನಾಗಸೇನ ವಿದ್ಯಾಲಯದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಎಸ್‌ಡಿ ರಾಜ್ಯ ಸಂಚಾಲಕ ಡಿ.ಎಂ. ಅಂಬರೀಶ್, ‘ಭೀಮಾ ಕೊರೇಗಾಂವ ಯುದ್ಧಕ್ಕೆ ಸಂಬಂಧಿಸಿದಂತೆ ಚರಿತ್ರೆಯ ಚಿಂತನೆಗಳು ಎಂಬ ನಾಲ್ಕು ವಿಚಾರಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರಗತಿಪರ ಚಿಂತಕರು ಈ ಗೋಷ್ಠಿಗಳನ್ನು ಭಾಗವಹಿಸಲಿದ್ದಾರೆ. ರಾಜ್ಯಸಭೆಯ ಸದಸ್ಯ ಎಲ್. ಹನುಮಂತಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ’ ಎಂದು ತಿಳಿಸಿದರು.
‘ಸಂಜೆ 7 ರಿಂದ ರಾತ್ರಿ 12 ಗಂಟೆವರೆಗೆ ಹತ್ತು ಕಲಾತಂಡಗಳಿಂದ ಭೀಮಗೀತೆ ಗಾಯನ ಕಾರ್ಯಕ್ರಮ ನಡೆಯಲಿದೆ’ ಎಂದರು.
ಜಾನಪದ ಸಾಹಿತಿ ಗೊಲ್ಲಹಳ್ಳಿ, ಬಾನಂದೂರು ಕೆಂಪಯ್ಯ, ಸುಬ್ಬುಹೊಲೆಯಾರ್ ಭಾಗವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.