ಬೆಂಗಳೂರು: ಮಹಿಳೆಯರ ಜೀವನ ಶೈಲಿಯನ್ನು ಉತ್ಕೃಷ್ಟಗೊಳಿಸಲು ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ವಿಶೇಷ ವೇದಿಕೆ ‘ಭೂಮಿಕಾ ಕ್ಲಬ್’ ನಿರ್ಮಿಸಿದ್ದು, ಶುಕ್ರವಾರ (ಆಗಸ್ಟ್ 26) ಮಧ್ಯಾಹ್ನ 2.30ಕ್ಕೆ ಉದ್ಘಾಟನೆಯಾಗಲಿದೆ.
ಅಶೋಕ ನಗರದಲ್ಲಿರುವಸೇಂಟ್ ಜೋಸೆಫ್ಸ್ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ. ಗಾಯಕಿ ಎಂ.ಡಿ. ಪಲ್ಲವಿ ಹಾಗೂ ಕಿರುತೆರೆ ಕಲಾವಿದೆ ರಂಜನಿ ರಾಘವನ್‘ಭೂಮಿಕಾ ಕ್ಲಬ್’ ಉದ್ಘಾಟಿಸಲಿದ್ದಾರೆ.
ಕೂದಲು ಮತ್ತು ಚರ್ಮ ಆರೋಗ್ಯದ ಬಗ್ಗೆ ಮಣಿಪಾಲ್ ಆಸ್ಪತ್ರೆಯ ವೈದ್ಯರಾದ ಡಾ. ದೀಪಾ ಕೃಷ್ಣಮೂರ್ತಿ ಹಾಗೂ ಡಾ. ಸುಚಿಸ್ಮಿತಾ ರಾಜಮಾನ್ಯ ಅರಿವು ಮೂಡಿಸುವರು. ಫ್ಯಾಷನ್ ಬಗ್ಗೆ ಶಚಿನ ಹೆಗ್ಗಾರ್, ಮೇಕಪ್ ಬಗ್ಗೆ ಸುಷ್ಮಾ ನಾಣಯ್ಯ ಮಾತನಾಡಲಿದ್ದಾರೆ. ತಾಜ್ ಹೋಟೆಲ್‌ನ ಬಾಣಸಿಗಆ್ಯಂಡ್ರಿಯಾ ಜುಡಿತ್ ಡಯಾಸ್ ಅವರುಅಡುಗೆ ಬಗ್ಗೆ ತಿಳಿಸಿಕೊಡಲಿದ್ದು, ಅಶ್ವಿನಿ ರವೀಂದ್ರ ಅವರಿಂದ ಸ್ಟ್ಯಾಂಡಪ್ ಕಾಮಿಡಿ ನಡೆಯಲಿದೆ. ವಿವಿಧ ಸ್ಪರ್ಧೆಗಳನ್ನು ನಡೆಸಲಾಗುತ್ತದೆ.
ಹೆಸರು ನೋಂದಾಯಿಸಿದವರಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ. ಐವರು ಅದೃಷ್ಟಶಾಲಿ ನೋಂದಾಯಿತರಿಗೆ ₹15 ಸಾವಿರ ಮೌಲ್ಯದ ಎಒ ಸ್ಮಿತ್ ವಾಟರ್ ಪ್ಯೂರಿಫೈರ್ ಗೆಲ್ಲುವ ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.ಸ್ಮೂರ್ ಚಾಕಲೇಟ್‌ನಿಂದ ಬಹುಮಾನ ಹಾಗೂ ಉಡುಗೊರೆ ಗೆಲ್ಲುವ ಅವಕಾಶವೂ ಉಂಟು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.