ಬೆಂಗಳೂರು: ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್‌ನ ವತಿಯಿಂದ ‘ಭೂಮಿಕಾ ಕ್ಲಬ್‌ನ ವಿವಾಹ ಆವೃತ್ತಿ’ ಕಾರ್ಯಕ್ರಮವು ಫೆ.25ರಂದು ನಡೆಯಲಿದೆ.
ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಕಾರ್ಯಕ್ರಮವನ್ನು ಪ್ರಾಯೋಜಿಸುತ್ತಿದೆ. ಸಮಾನಮನಸ್ಕರು, ಮದುವೆ ಕುರಿತ ಸಂಭ್ರಮಾಚರಣೆ ಕುರಿತ ಹೊಸ ವಿಷಯಗಳನ್ನು ಅರಿತುಕೊಳ್ಳಬಹುದಾಗಿದೆ. ಸೃಜನಶೀಲವೂ ಮೋಜು–ಮಸ್ತಿ ನೀಡುವಂತಹದ್ದೂ ಆದ ಕಾರ್ಯಕ್ರಮ ಇದಾಗಿದೆ.
ಅಶೋಕನಗರದ ಕ್ರೇಗ್ ಪಾರ್ಕ್ ಲೇಔಟ್‌ನ ಪ್ರಿಮ್‌ರೋಸ್ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಕಾರ್ಯಕ್ರಮಶವು ಫೆ.25ರ ಶನಿವಾರ ಮಧ್ಯಾಹ್ನ 2.30ಕ್ಕೆ ಪ್ರಾರಂಭವಾಗಲಿದೆ.
ನಟಿ ಭೂಮಿ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಗೀತಾ ನಾಯ್ಡು ಅವರು ವಿವಾಹ ಯೋಜನೆಗೋಷ್ಠಿ, ಶೈನಿ ಅಲೆಕ್ಸಾಂಡರ್ ಅವರು ವಿವಾಹ ಶೈಲಿ ಹಾಗೂ ಸುಷ್ಮಾ ನಾಣಯ್ಯ ಅವರು ಮೇಕ್‌ಅಪ್ ಬಗ್ಗೆ ಗೋಷ್ಠಿ ನಡೆಸಿಕೊಡಲಿದ್ದಾರೆ. ’ಸ್ಟಿಲೆ ಸ್ಟ್ರಾಡ’ ತಂಡದವರಿಂದ ಫ್ಯಾಷನ್ ಶೋ ನಡೆಯಲಿದೆ. ಭವಾನಿ ಪ್ರಕಾಶ್ ‘ಶೋ ಸ್ಟಾಪರ್’ ಆಗಲಿದ್ದಾರೆ. ಬಕ್ಷ್ ಅಲಿ, ಕೆ. ಧನುಪ್ರಿಯ ವಿನ್ಯಾಸ ಮಾಡಿದ ಉಡುಗೆಗಳನ್ನು ರೂಪದರ್ಶಿಯರು ತೊಟ್ಟು ರಂಜಿಸಲಿದ್ದಾರೆ. ಆದರ್ಶ ಜೈನ್ ಕೊರಿಯಾಗ್ರಫಿಯಲ್ಲಿ ಫ್ಯಾಷನ್ ಶೋ ನಡೆಯಲಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಅಚ್ಚರಿಯ ಬಹುಮಾನ ದೊರೆಯಲಿದೆ. ಎಲ್ಲರಿಗೂ ಉಡುಗೊರೆ ಲಭಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.