ADVERTISEMENT

ಬೆಂಗಳೂರು | ಕಾರ್ ಡೋರ್‌ಗೆ ಬೈಕ್‌ ಡಿಕ್ಕಿ: ನಿಮ್ಹಾನ್ಸ್ ಉದ್ಯೋಗಿ ಸಾವು

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2024, 15:50 IST
Last Updated 16 ಮಾರ್ಚ್ 2024, 15:50 IST
ಅಪಘಾತ
ಅಪಘಾತ   

ಬೆಂಗಳೂರು: ರಸ್ತೆ ಬದಿಯಲ್ಲಿ ನಿಲುಗಡೆ ಮಾಡಲಾಗಿದ್ದ ಕಾರಿನ ಡೋರ್‌ ಅನ್ನು ಏಕಾಏಕಿ ತೆಗೆದ ಪರಿಣಾಮ, ಡೋರಿಗೆ ಬೈಕ್‌ ಡಿಕ್ಕಿ ಹೊಡೆದು ನಿಮ್ಹಾನ್ಸ್‌ ಉದ್ಯೋಗಿ ವೆಂಕಟೇಶ್‌ (50) ಮೃತಪಟ್ಟಿದ್ದಾರೆ.

‘ತಿಲಕ್‌ನಗರ ಮುಖ್ಯರಸ್ತೆಯ ನಿಮ್ಹಾನ್ಸ್‌ ಆಸ್ಪತ್ರೆಯ ಸಮೀಪ ರಸ್ತೆಬದಿಯಲ್ಲಿ ಕಾರನ್ನು ನಿಲುಗಡೆ ಮಾಡಲಾಗಿತ್ತು. ರಾತ್ರಿ 8 ಗಂಟೆಯ ಸುಮಾರಿಗೆ ವೆಂಕಟೇಶ್‌ ಅವರು, ಕಾರು ನಿಲುಗಡೆ ಮಾಡಿದ ಮಾರ್ಗದಲ್ಲೇ ತೆರಳುತ್ತಿದ್ದರು. ಕಾರಿನಲ್ಲಿದ್ದವರು ಏಕಾಏಕಿಯಾಗಿ ಡೋರ್‌ ತೆಗೆದಿದ್ದರಿಂದ ಬೈಕ್‌ ಸವಾರನಿಗೆ ತಗುಲಿ ಅವರು ಕೆಳಕ್ಕೆ ಬಿದ್ದಿದ್ದರು. ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು’ ಎಂದು ಪೊಲೀಸರು ಹೇಳಿದರು.

ಮೈಕೋ ಲೇಔಟ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.