ಬೆಂಗಳೂರು: ಮಹಿಳೆಯರಿಗಾಗಿಯೇ ಪ್ರತ್ಯೇಕ ಬೈಕ್ ರೈಡಿಂಗ್ ಕ್ಲಬ್ ಸ್ಥಾಪಿಸಿ ಎಲ್ಲ ರೀತಿಯ ರಕ್ಷಣೆ, ಸುರಕ್ಷತೆ ಕಲ್ಪಿಸಿ ಈ ವಲಯದಲ್ಲಿ ಹೊಸ ಅಧ್ಯಾಯ ಆರಂಭಿಸಲಾಗುವುದು ಎಂದು ಬೈಕ್ ರೈಡರ್, ಬಾಲಿವುಡ್ ನಟ ವಿವೇಕ್ ಒಬೆರಾಯ್ ತಿಳಿಸಿದರು.
ಎಲ್ಲೊ ಹ್ಯಾಟ್ ರೈಡರ್ಸ್ ಕ್ಲಬ್ ಹಾಗೂ ರೆಡಿ ಅಸಿಸ್ಟ್ ಸಂಸ್ಥೆಯ ಸಹಯೋಗದಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆದ ದೇಶದ ಪ್ರಮುಖ ಬೈಕ್ ರೈಡರ್‌ಗಳ ಸಮಾವೇಶದಲ್ಲಿ ಅವರು ಮಾತನಾಡಿದರು.
ಬೈಕ್ ರೈಡರ್‌ಗಳನ್ನು ಉತ್ತೇಜಿಸಲು ದೊಡ್ಡ ಮಟ್ಟದ ವೇದಿಕೆ ಕಲ್ಪಿಸಲಾಗಿದೆ. ಬೈಕ್ ರೈಡಿಂಗ್ ಅದ್ಭುತ ಅನುಭವವಷ್ಟೇ ಅಲ್ಲ, ಜೀವನ ಕ್ರಮವೂ ಆಗಿದೆ. ಬೈಕ್ ರೈಡರ್‌ಗಳಿಗೆ ಸಕಲ ವ್ಯವಸ್ಥೆ ಹೊಂದಿರುವ ಪರಿಸರ ಸ್ನೇಹಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇನ್ನೊಂದು ವರ್ಷದಲ್ಲಿ 29 ರಾಜ್ಯಗಳಲ್ಲೂ ಬೈಕ್ ರೈಡಿಂಗ್ ಕ್ಲಬ್‌ಗಳನ್ನು ವಿಸ್ತರಿಸಲಾಗುವುದು ಎಂದರು.
ಕರ್ನಾಟಕ ಪ್ರವಾಸೋದ್ಯಮಕ್ಕೆ ಖ್ಯಾತಿ ಪಡೆದಿದ್ದು, ಬೈಕ್ ರೈಡಿಂಗ್ ಮೂಲಕ ವಿಶಿಷ್ಟ ತಾಣಗಳನ್ನು ಅನ್ವೇಷಣೆ ಮಾಡಬೇಕು ಎಂದು ತಿಳಿಸಿದರು.
ಕನಕಪುರ ರಸ್ತೆಯ ಬಿ.ಎಲ್.ಆರ್. ಬ್ರೇವಿಂಗ್ ರೆಸಾರ್ಟ್ಸ್‌ನಲ್ಲಿ ಬೈಕ್ ರೈಡರ್‌ಗಳು ರೋಮಾಂಚಕಾರಿ ಸಾಹಸ ಪ್ರದರ್ಶನ ಮಾಡಿದರು. ಅವರಿಗೆ ಎಲ್ಲೋ ಹ್ಯಾಟ್ ರೈಡರ್ಸ್ ಕ್ಲಬ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರೆಡಿಅಸಿಸ್ಟ್ ನ ಸಂಸ್ಥಾಪಕ ಮತ್ತು ಸಿಇಒ ಎಸ್.ವಿ. ವಿಮಲ್ ಸಿಂಗ್ ಇದ್ದರು. ರೆಡಿ ಅಸಿಸ್ಟ್ ಸಂಸ್ಥೆ ಈ ಕಾರ್ಯಕ್ರಮದ ಮೂಲಕ 36 ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಾಯೋಜಕತ್ವವನ್ನು ವಹಿಸಿಕೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.