ಬೆಂಗಳೂರು: ನಗರದ ಹಲಸೂರಿನಲ್ಲಿ ರಸ್ತೆ ಗುಂಡಿಯಿಂದಾಗಿ ಬಿದ್ದ ಬೈಕ್ ಸವಾರ ಅರ್ಧ ದಿನ, ಬಿದ್ದ ಜಾಗದಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
ಬೈಕ್ ಸವಾರಶನಿವಾರಪ್ರತಿಭಟನೆ ನಡೆಸುತ್ತಿರುವ ವಿಡಿಯೊವನ್ನು ಕಾಂಗ್ರೆಸ್ ಟ್ವೀಟ್ ಮಾಡಿದೆ.
#TroubleEngineSarkara (ಟ್ರಬಲ್ ಎಂಜಿನ್ ಸರ್ಕಾರ) ಟ್ಯಾಗ್ ಬಳಸಿ,ಮೋದಿ ಭೇಟಿಗಾಗಿ ತೇಪೆ ಹಾಕುವ ಸರ್ಕಾರ ಜನ ಸಾಯುತ್ತಿದ್ದರೂ ಗುಂಡಿ ಮುಚ್ಚುವುದಿಲ್ಲವೇಕೆ? ಜನರ ಹಿತ ಬಿಜೆಪಿಗೆ ಬೇಕಿಲ್ಲವೇ? ಎಂದು ಕೇಳಿದೆ.
ಹಾಗೆಯೇ, ರಾಜ್ಯ ಸರ್ಕಾರವು ಮಾನ, ಮರ್ಯಾದೆ, ನಾಚಿಕೆಮೂರನ್ನೂ ಬಿಟ್ಟಿದೆ ಎಂದು ಕಿಡಿಕಾರಿದೆ.
ಪೀಣ್ಯ 2ನೇ ಹಂತದ ನಿವಾಸಿ ಎಸ್.ಸುಗುಣ ಎನ್ನುವವರು ರಸ್ತೆ ಗುಂಡಿಯಿಂದಾಗಿ ಅಪಘಾತಕ್ಕೀಡಾಗಿಚಿಕಿತ್ಸೆಗೆ ₹ 7.5 ಲಕ್ಷ ಶುಲ್ಕ ಭರಿಸಬೇಕಾಗಿದೆ ಎಂಬ ವರದಿಪ್ರಜಾವಾಣಿಯಲ್ಲಿ ನವೆಂಬರ್ 8ರಂದು ವರದಿ ಪ್ರಕಟವಾಗಿತ್ತು.
ಸುಗುಣ ಅವರುಅಕ್ಟೋಬರ್ 16ರಂದು ನಂದಿನಿ ಲೇಔಟ್‌ನಿಂದ ಮರಳುತ್ತಿದ್ದಾಗತಮ್ಮ ಮನೆಯಿಂದ ಒಂದೂವರೆ ಕಿ.ಮೀ. ದೂರದಲ್ಲಿ ದೊಡ್ಡ ರಸ್ತೆಗುಂಡಿಗೆ ದ್ವಿಚಕ್ರ ವಾಹನದ ಚಕ್ರ ಇಳಿದು ಆಯತಪ್ಪಿ ಬಿದ್ದಿದ್ದರು. ಅವರು 15 ದಿನಗಳ ಆಸ್ಪತ್ರೆ ಚಿಕಿತ್ಸೆಗೆ ₹ 7.5 ಲಕ್ಷ ಶುಲ್ಕ ಭರಿಸಬೇಕಾಗಿ ಬಂದಿದ್ದೇ ಅಲ್ಲದೆ, ಆರು ವಾರ ವಿಶ್ರಾಂತಿ ಪಡೆಯಬೇಕಾದ ಸ್ಥಿತಿ ತಲುಪಿದ್ದಾರೆ.
ಇಂತಹ ಪ್ರಕರಣಗಳು ನಗರದಲ್ಲಿ ಮರುಕಳಿಸುತ್ತಲೇ ಇವೆ.ಈ ಹಿನ್ನೆಲೆಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಒತ್ತಾಯಿಸಿ ಸಾರ್ವಜನಿಕರು ಆಗಾಗ್ಗೆ ಪ್ರತಿಭಟನೆಗಳನ್ನು ನಡೆಸುತ್ತಿರುತ್ತಾರೆ.
ಬೆಂಗಳೂರಿನಲ್ಲಿನ ರಸ್ತೆಗಳಲ್ಲಿರುವ 11 ಸಾವಿರಕ್ಕೂ ಹೆಚ್ಚು ಗುಂಡಿಗಳನ್ನು ನವೆಂಬರ್ 10ರೊಳಗೆ ಮುಚ್ಚಬೇಕು ಎಂದು ಬಿಬಿಎಂಪಿ, ಎಂಜಿನಿಯರ್‌ಗಳಿಗೆ ಸೂಚಿಸಿತ್ತು. ಇಲ್ಲದಿದ್ದರೆ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿತ್ತು.
ಇವನ್ನೂ ಓದಿ
*ಬೆಂಗಳೂರು: ಗುಂಡಿ ಮುಚ್ಚಲು ನ.10ರ ಗಡುವು
*ಗುಂಡಿ ಮುಚ್ಚಿಸಲು ಪ್ರಧಾನಿಯೇ ಬರಬೇಕೆ? ನಾಗರಿಕರಿಗೆ ಸ್ಪಂದಿಸದ ಬಿಬಿಎಂಪಿ ಆಡಳಿತ
*ರಸ್ತೆಯಲ್ಲಿ ಹೊಂಡ: ಮುಖ್ಯಮಂತ್ರಿಗಳೇ ಸ್ವಲ್ಪ ನೋಡಿ ಎಂದು ಮನವಿ ಮಾಡಿದ ಬಾಲಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.