ADVERTISEMENT

ಚಿಂತನಾಶೀಲ ನಾಯಕರ ರೂಪಿಸುವ ಬಯೋಸೈನ್ಸ್‌: ಕಿರಣ್ ಮಜುಂದಾರ್

ಚಾಣಕ್ಯ ಸ್ಕೂಲ್‌ ಆಫ್‌ ಬಯೋಸೈನ್ಸ್‌ ಉದ್ಘಾಟಿಸಿದ ಕಿರಣ್ ಮಜುಂದಾರ್ ಶಾ

​ಪ್ರಜಾವಾಣಿ ವಾರ್ತೆ
Published 11 ಮೇ 2024, 15:51 IST
Last Updated 11 ಮೇ 2024, 15:51 IST
ಚಾಣಕ್ಯ ಸ್ಕೂಲ್‌ ಆಫ್‌ ಬಯೋಸೈನ್ಸ್‌ ಪ್ರಯೋಗಾಲಯ ಉದ್ಘಾಟನಾ ಸಮಾರಂಭದಲ್ಲಿ ಬಯೋಕಾನ್‌ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಭಾಗವಹಿಸಿದ್ದರು. ಚಾಣಕ್ಯ ವಿಶ್ವವಿದ್ಯಾನಿಲಯದ ಕುಲಪತಿ ಎಚ್ ಎಸ್ ಅಶೋಕ್, ಕುಲಾಧಿಪತಿ ಎಂ.ಕೆ. ಶ್ರೀಧರ್, ಕುಲಪತಿ ಎಂ.ಪಿ. ಕುಮಾರ್, ಸಹಕುಲಾಧಿಪತಿ ನಾಗರಾಜ್ ರೆಡ್ಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಶಾಂತ್ ಜೋಶಿ ಉಪಸ್ಥಿತರಿದ್ದರು.

ಬೆಂಗಳೂರು: ‘ಮುಂದಿನ ಪೀಳಿಗೆಯನ್ನು ಚಿಂತನಾಶೀಲ ನಾಯಕರನ್ನಾಗಿ ರೂಪಿಸಲು ಬಯೋಸೈನ್ಸ್‌ ಸಹಕಾರಿಯಾಗಲಿದೆ’ ಎಂದು ಬಯೋಕಾನ್‌ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ತಿಳಿಸಿದರು.‌

ಚಾಣಕ್ಯ ಸ್ಕೂಲ್‌ ಆಫ್‌ ಬಯೋಸೈನ್ಸ್‌ ಪ್ರಯೋಗಾಲಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇದು ಶಿಕ್ಷಣ ಮತ್ತು ಸಂಶೋಧನೆಯನ್ನು ಹೆಚ್ಚಿಸುವುದಲ್ಲದೇ ಸಾಮೂಹಿಕ ಅನ್ವೇಷಣೆ ಹಾಗೂ ಆರೋಗ್ಯ ರಕ್ಷಣೆ, ಪರಿಸರ ಸುಸ್ಥಿರತೆಗೆ ಜಾಗತಿಕ ಸವಾಲುಗಳನ್ನು ಎದುರಿಸಲು ಒಂದು ದಿಟ್ಟ ಹೆಜ್ಜೆ ಎಂದು ಅವರು ಬಣ್ಣಿಸಿದರು.

ADVERTISEMENT

ಸುಧಾರಿತ ಉಪಕರಣಗಳು ಮತ್ತು ಮೂಲಸೌಕರ್ಯಗಳೊಂದಿಗೆ ಸುಸಜ್ಜಿತವಾಗಿರುವ ಬಯೋ ಸೈನ್ಸ್‌ನಲ್ಲಿ ಲ್ಯಾಬ್ ಜೀನೋಮಿಕ್ಸ್, ಬಯೋ ಎಂಜಿನಿಯರಿಂಗ್, ಡೀಸೆಲ್ ಬಯಾಲಜಿ, ಕಂಪ್ಯೂಟೇಷನಲ್ ಬಯಾಲಜಿ ಸಹಿತ ವಿವಿಧ ಚಟುವಟಿಕೆಗಳು ನಡೆಯಲಿವೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.