ಬೆಂಗಳೂರು: ಹನಿ ನೀರೂ ಕರುಣಿಸದೆ ದೂಳು ಮೆತ್ತಿಕೊಂಡು ನಿಂತಿರುವ ನಲ್ಲಿಗಳು, ತುಕ್ಕು ಹಿಡಿದು ರೋಗಗ್ರಸ್ತವಾಗಿ ಮೂಲೆ ಸೇರಿರುವ ನೀರಿನ ತೊಟ್ಟಿಗಳು. ದುಪ್ಪಟ್ಟು ಹಣ ನೀಡಿನೀರನ್ನುಖರೀದಿಸಲಾಗದೆ ತೃಷೆಯನ್ನು ಅದುಮಿಟ್ಟುಕೊಂಡು ಬಸ್‌ಗಾಗಿ ಕಾಯುವ ಪ್ರಯಾಣಿಕರು...
ಇದು ರಾಜಧಾನಿಯ ಹೃದಯ ಭಾಗದಲ್ಲಿರುವ ಮೆಜೆಸ್ಟಿಕ್‌ನಕೆಂಪೇಗೌಡ ಬಸ್ ನಿಲ್ದಾಣದಲ್ಲಿ (ಕೆಬಿಎಸ್) ಕಂಡ ನೋಟ.
ದಿನನಿತ್ಯ ಜನ ಈ ನಿಲ್ದಾಣದಿಂದಇತರೆ ಪ್ರದೇಶಗಳಿಗೆ ತೆರಳುತ್ತಾರೆ. ಅಲ್ಲದೆಕೆ.ಆರ್ ಮಾರ್ಕೆಟ್ ಬಳಿಕ ಹೆಚ್ಚು ಮಾರ್ಗಗಳಿಗೆ ಬಸ್‌ಗಳು ಇಲ್ಲಿಂದಲೇಸಂಚರಿಸುತ್ತವೆ. ಆದ್ದರಿಂದ ಸದಾಜನರಿಂದ ಗಿಜಿಗುಡುತ್ತಿರುತ್ತದೆ.
ಆದರೆ ಇಂತಹ ಜನದಟ್ಟಣೆಯ ನಿಲ್ದಾಣದಲ್ಲಿಕುಡಿಯುವ ನೀರಿಲ್ಲ. ತೊಟ್ಟಿಗಳು ಇದ್ದರು ಸಹ ಸುಸ್ಥಿತಿಯಲ್ಲಿಲ್ಲ. ಅಷ್ಟೇ ಅಲ್ಲದೆ ಪ್ರಯಾಣಿಕರು ನೆಮ್ಮದಿಯಾಗಿ ಶೌಚಕ್ಕೂ ಹೋಗದ ಸ್ಥಿತಿ ನಿರ್ಮಾಣವಾಗಿದೆ.
ನಿಲ್ದಾಣದಲ್ಲಿರುವ ಕುಡಿಯುವ ನೀರಿನ ತೊಟ್ಟಿಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ಅದರನಲ್ಲಿಗಳು ತುಕ್ಕು ಹಿಡಿದು, ದೂಳು ಮೆತ್ತಿಕೊಂಡು ನಿಂತಿವೆ. ಕಾರ್ಯಾಚರಣೆ
ಯಲ್ಲಿದ್ದಏಕೈಕ ಘಟಕವು ಸಹ ಕೆಲವು ದಿನಗಳಿಂದ ಕಾರ್ಯನಿರ್ವಹಿಸುತ್ತಿಲ್ಲ. ಜನ ನೀರು ಕುಡಿಯಲು ಬಂದು ನಲ್ಲಿ ತಿರುಗಿಸಿ ನಿರಾಶೆಯಿಂದ ಹಿಂದಿರುಗುತ್ತಾರೆ. ನೀರಿನ ಬಾಟಲಿಗಳಿಗೆ ಹೆಚ್ಚಿನ ಬೆಲೆಯನ್ನು ವಿಧಿಸುವ ಮೂಲಕ ಅಲ್ಲಿರುವ ಅಂಗಡಿಗಳು ಇದರ ಲಾಭ ಪಡೆಯುತ್ತಿವೆ. ಇಲ್ಲಿಯಶೌಚಾಲಯಗಳಲ್ಲಿ ಮೂತ್ರ ವಿಸರ್ಜನೆಗೂ ಹಣ ಕೊಡಬೇಕಾದ ಸ್ಥಿತಿ ಇದೆ.
ಪ್ರಾರಂಭದಲ್ಲಿನೀರಿನ ಘಟಕಗಳು ಸುಸ್ಥಿತಿಯಲ್ಲಿದ್ದವು. ಬಿಎಂಟಿಸಿಬಸ್ ಚಾಲಕರು ಹಾಗೂ ನಿರ್ವಾಹಕರು ಸಹ ಈ ಘಟಕಗಳಲ್ಲಿ ಕುಡಿಯಲುನೀರು ತುಂಬಿ
ಕೊಳ್ಳುತ್ತಿದ್ದರು. ಸದ್ಯ ಅವು ಕಾರ್ಯನಿರ್ವಹಿಸುತ್ತಿಲ್ಲ. ಆದ್ದರಿಂದಅವರು ಹೋಟೆಲ್ ಹಾಗೂ ಅಂಗಡಿಗಳ ಮೊರೆ ಹೋಗುತ್ತಿದ್ದಾರೆ.
ಬಸ್ ನಿಲ್ದಾಣಗಳಲ್ಲಿ ‘ಶುದ್ಧ ಕುಡಿಯುವ ನೀರಿನ ವ್ಯವಸ್ಥೆ’ಯಂತಹ ಪ್ರಯಾಣಿಕ ಸ್ನೇಹಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಬಿಎಂಟಿಸಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದೆ. ಆದರೆ, ಬಿಎಂಟಿಸಿಯ ಮುಖ್ಯ ನಿಲ್ದಾಣದಲ್ಲಿ ಕಾಣುವ ಸ್ಥಿತಿಯೇ ಭಿನ್ನವಾಗಿದೆ.
ನಿರ್ವಾಹಕರೊಬ್ಬರನ್ನು ಮಾತಿಗೆಳೆದಾಗ ‘ಒಂದು ಘಟಕದಲ್ಲಿ ನೀರು ಸಿಗುತ್ತಿತ್ತು. ನಾವು ಸಹ ಆ ನೀರನ್ನೇ ಕುಡಿಯುತ್ತಿದ್ದೆವು. ಕೆಲವು ದಿನಗಳಿಂದ ಆ ಘಟಕವೂ ಕಾರ್ಯನಿರ್ವಹಿಸುತ್ತಿಲ್ಲ. ಹಣ ಕೊಟ್ಟು ನೀರು ಕುಡಿಯುವುದು ಅನಿವಾರ್ಯವಾಗಿದೆ’ ಎಂದು ತಿಳಿಸಿದರು.
ಎಲ್ಲದಕ್ಕೂ ದುಡ್ಡು!
ನಿಲ್ದಾಣದ ಆವರಣದಲ್ಲಿರುವ ಶೌಚಾಲಯಗಳ ಗೋಡೆಗಳ ಮೇಲೆ ‘ಮೂತ್ರ ವಿಸರ್ಜನೆ ಉಚಿತ, ಟಾಯ್ಲೆಟ್‌ಗೆ ಐದು ರೂಪಾಯಿ’ ಎಂದು ದಪ್ಪ ಅಕ್ಷರಗಳಲ್ಲಿ ಬರೆಯಲಾಗಿದೆ. ಆದರೆ ಶೌಚಾಲಯದ ಗಲ್ಲಾ ಪೆಟ್ಟಿಗೆಯ ಮೇಲೆ ಕುಳಿತವನು ಸಾರ್ವಜನಿಕರಿಗೆ ದಬಾಯಿಸಿಮೂತ್ರ ವಿಸರ್ಜನೆಗೂ ಹಣ ವಸೂಲಿ ಮಾಡುತ್ತಾನೆ.
*ವಿಷಯ ನನ್ನ ಗಮನಕ್ಕೆ ಬಂದಿದೆ. ಅಧಿಕಾರಿಗಳನ್ನು ಕಳುಹಿಸಿ ಪರಿಶೀಲಿಸಿದ ಬಳಿಕ ಲೋಪ ಸರಿಪಡಿಸಲು ಕ್ರಮಕೈಗೊಳ್ಳುತ್ತೇನೆ
–ಡಾ.ಎನ್.ವಿ.ಪ್ರಸಾದ್, ವ್ಯವಸ್ಥಾಪಕ ನಿರ್ದೇಶಕರು ಬಿಎಂಟಿಸಿ
*ನಿಲ್ದಾಣದಲ್ಲಿ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿವೆ. ಪ್ರಯಾಣಿಕರಿಂದ ಹೆಚ್ಚಿನ ಹಣವನ್ನು ಕಿತ್ತುಕೊಳ್ಳುವ ಮೂಲಕ ಅಂಗಡಿಗಳು ಇದರ ಲಾಭ ಪಡೆಯುತ್ತಿವೆ -ರಮೇಶ್, ಪ್ರಯಾಣಿಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.