ಬೆಂಗಳೂರು: ಬೋಲಾಸ್ ಅಗ್ರೋ ಪ್ರೈವೇಟ್ ಲಿಮಿಟೆಡ್ ಕಂಪನಿ ತನ್ನ 20 ನೂತನ ಮಳಿಗೆಗಳನ್ನು ನಗರದಲ್ಲಿ ಆರಂಭಿಸಿದೆ.
ಪೈ ಗ್ರೂಪ್ ಆಫ್ ಹೋಟೆಲ್ ಅಧ್ಯಕ್ಷ ಜಗನ್ನಾಥ್ ವಿ. ಪೈ ಅವರು ಜಯನಗರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಳಿಗೆಗಳಿಗೆ ಚಾಲನೆ ನೀಡಿದರು.
ಮತ್ತಿಕೆರೆ, ವಿದ್ಯಾರಣ್ಯಪುರ, ನೆಲಮಂಗಲ, ಬನ್ನೇರುಘಟ್ಟ, ಬಸವೇಶ್ವರ ನಗರ, ಮಲ್ಲೇಶ್ವರ, ವಿಜಯನಗರ, ಟಿಸಿ ಪಾಳ್ಯ, ಗಾಂಧಿ ಬಜಾರ್, ಬಾಣಸವಾಡಿ, ಬನಶಂಕರಿ, ಉತ್ತರಹಳ್ಳಿ, ಜಯನಗರ, ವಿಲ್ಸನ್‌ಗಾರ್ಡನ್, ಎಚ್‌ಎಸ್‌ಆರ್ ಲೇಔಟ್, ಆರ್.ಟಿ. ನಗರ, ನ್ಯೂ ತಿಪ್ಪಸಂದ್ರ, ಸರ್ಜಾಪುರ ರಸ್ತೆ ಮತ್ತು ಹರಳೂರುಗಳಲ್ಲಿ ಮಳಿಗೆಗಳನ್ನು ತೆರೆಯಲಾಗಿದೆ
ಬೋಲಾಸ್ ಅಗ್ರೋ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಬೋಲಾ ರಾಹುಲ್ ಮಾತನಾಡಿ, ಗೋಡಂಬಿ, ದ್ರಾಕ್ಷಿ, ಬಾದಾಮಿ ಮುಂತಾದ ಡ್ರೈ ಫ್ರೂಟ್‌ಗಳು ವಿಲಾಸಿ ವಸ್ತುಗಳು ಎನ್ನುವ ಗ್ರಾಹಕರ ಗ್ರಹಿಕೆಯನ್ನು ಬದಲಾಯಿಸುವುದು ನಮ್ಮ ಗುರಿಯಾಗಿದೆ’ ಎಂದು ತಿಳಿಸಿದ್ದಾರೆ.
ಮಾಹಿತಿಗೆ: https://bolas.co.in/dry-fruits
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.