ADVERTISEMENT

ಪುಸ್ತಕ ಬಹುಮಾನಕ್ಕೆ ಕೃತಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 16:28 IST
Last Updated 25 ಜೂನ್ 2024, 16:28 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯು ಪುಸ್ತಕ ಬಹುಮಾನಕ್ಕೆ ರಂಗಭೂಮಿಗೆ ಸಂಬಂಧಿಸಿದ ಪುಸ್ತಕಗಳನ್ನು ಆಹ್ವಾನಿಸಿದೆ. 

2021, 2022 ಹಾಗೂ 2023ರಲ್ಲಿ ಪ್ರಕಟವಾದ ಪುಸ್ತಕಗಳನ್ನು ಈ ಬಹುಮಾನಕ್ಕೆ ಪರಿಗಣಿಸಲಾಗುತ್ತದೆ. ಪ್ರತಿ ವರ್ಷಕ್ಕೆ ಒಂದರಂತೆ ಪುಸ್ತಕವನ್ನು ಆಯ್ಕೆ ಮಾಡಿ, ತಲಾ ₹ 25 ಸಾವಿರ ನಗದು ಸಹಿತ ಬಹುಮಾನ ನೀಡಲಾಗುತ್ತದೆ. ರಂಗಭೂಮಿಯ ಬೆಳವಣಿಗೆ, ರಂಗಭೂಮಿಯ ವೈವಿಧ್ಯತೆ ಹಾಗೂ ರಂಗಭೂಮಿಯ ಇತಿಹಾಸವನ್ನು ತಿಳಿಸುವಂತಹ ಕೃತಿಗಳನ್ನು ಕಳುಹಿಸಬಹುದಾಗಿದೆ. 

ADVERTISEMENT

2021ರ ಜ.1ರಿಂದ 2023ರ ಡಿ.31ರೊಳಗೆ ಪುಸ್ತಕ ಪ್ರಕಟವಾಗಿರಬೇಕು. ಅನುವಾದಿತ ಹಾಗೂ ಮರು ಮುದ್ರಣಗೊಂಡ ಕೃತಿಗಳಿಗೆ ಅವಕಾಶವಿಲ್ಲ. ಕೃತಿಯು ಕನಿಷ್ಠ 60 ಪುಟಗಳನ್ನು ಹೊಂದಿರಬೇಕು. ಪುಸ್ತಕ ಬಹುಮಾನಕ್ಕೆ ಲೇಖಕರು ಮಾತ್ರ ಅರ್ಹರಾಗಿರುತ್ತಾರೆ.

ಆಸಕ್ತರು ಪುಸ್ತಕದ ನಾಲ್ಕು ಪ್ರತಿಗಳನ್ನು ರಿಜಿಸ್ಟ್ರಾರ್, ಕರ್ನಾಟಕ ನಾಟಕ ಅಕಾಡೆಮಿ, ನೆಲಮಹಡಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು–02 ಈ ವಿಳಾಸಕ್ಕೆ ಜುಲೈ 20ರೊಳಗೆ ಕಳುಹಿಸಬೇಕು ಎಂದು ಅಕಾಡೆಮಿ ರಿಜಿಸ್ಟ್ರಾರ್ ಎನ್. ನಮೃತಾ ತಿಳಿಸಿದ್ದಾರೆ.  

ಸಂಪರ್ಕಕ್ಕೆ: 080 22244176

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.