ADVERTISEMENT

‘ನನ್ನ ನಗರ, ನನ್ನ ಜವಾಬ್ದಾರಿ’ ಕೈಪಿಡಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2024, 19:40 IST
Last Updated 5 ಫೆಬ್ರುವರಿ 2024, 19:40 IST
ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರು, ‘ನನ್ನ ನಗರ, ನನ್ನ ಜವಾಬ್ದಾರಿ’ ಕೈಪಿಡಿ ಬಿಡುಗಡೆ ಮಾಡಿದರು
ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರು, ‘ನನ್ನ ನಗರ, ನನ್ನ ಜವಾಬ್ದಾರಿ’ ಕೈಪಿಡಿ ಬಿಡುಗಡೆ ಮಾಡಿದರು   

ಬೆಂಗಳೂರು: ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನಾಗ್ರಹ ಸಿಟಿಜನ್‌ಶಿಪ್ ಆ್ಯಂಡ್‌ ಡೆಮಾಕ್ರಸಿ ಹೊರತಂದಿರುವ ‘ನನ್ನ ನಗರ, ನನ್ನ ಜವಾಬ್ದಾರಿ’ ಕೈಪಿಡಿಯ ಕರ್ನಾಟಕ ಆವೃತ್ತಿಯನ್ನು ಗಣ್ಯರು ಬಿಡುಗಡೆ ಮಾಡಿದರು.

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ಸುವರ್ಣ ಕಲ್ಲಕುಂಟ್ಲ, ಬಿಬಿಎಂಪಿ ಮಾಜಿ ಸದಸ್ಯ ಅಬ್ದುಲ್ ವಾಜಿದ್, ಶಿವಮೊಗ್ಗ ನಗರ ಪಾಲಿಕೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಧೀರರಾಜ್ ಹೊನ್ನವಿಲೆ ಅವರು ಕೈಪಿಡಿಯನ್ನು ಬಿಡುಗಡೆ ಮಾಡಿದರು.

ಜನಾಗ್ರಹದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕಾಂತ್ ವಿಶ್ವನಾಥನ್ ಮಾತನಾಡಿ, ‘ವಾರ್ಡ್‌ ಸಮಿತಿ ಸಭೆ ಹಾಗೂ ಸೇವಾ ವಿತರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರೆ ಮಾತ್ರ ನಗರಗಳಲ್ಲಿ ಜೀವನಮಟ್ಟ ಸುಧಾರಣೆ ಮಾಡಲು ಸಾಧ್ಯವಾಗಲಿದೆ’ ಎಂದು ಹೇಳಿದರು.

ADVERTISEMENT

ಜನಾಗ್ರಹದ ನಾಗರಿಕ ಸಹಭಾಗಿತ್ವ ಕಾರ್ಯಕ್ರಮದ ಮುಖ್ಯಸ್ಥ ಸಂತೋಷ್ ನರಗುಂದ ಮಾತನಾಡಿ, ‘ಈ ಕೈಪಿಡಿ ಮೂಲಕ ಕರ್ನಾಟಕದ 315 ಸಣ್ಣ ಮತ್ತು ದೊಡ್ಡ ಪಟ್ಟಣಗಳು ಮತ್ತು 7 ಸಾವಿರ ವಾರ್ಡ್‌ಗಳಲ್ಲಿನ ಸಮಸ್ಯೆ ಪರಿಹರಿಸುವ ಗುರಿ ಹೊಂದಿದ್ದೇವೆ’ ಎಂದರು.

ಉದ್ಘಾಟನೆ ನಂತರ ‘ನಾಗರಿಕರ ಸಹಭಾಗಿತ್ವದೊಂದಿಗೆ ಸಮಾನ ಮತ್ತು ಸುಸ್ಥಿರ ನಗರಗಳ ನಿರ್ಮಾಣ’ ಎಂಬ ವಿಷಯದ ಕುರಿತು ಸಂವಾದ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.