ADVERTISEMENT

ಹೆದ್ದಾರಿಯಲ್ಲಿ ತೇಜಸ್ವಿ ಹುಟ್ಟುಹಬ್ಬ ಆಚರಣೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2018, 14:39 IST
Last Updated 9 ಸೆಪ್ಟೆಂಬರ್ 2018, 14:39 IST
ಅಂಕಣಕಾರ ನಾಗೇಶ ಹೆಗಡೆ ಅವರು ಪುಸ್ತಕ ಬಿಡುಗಡೆ ಮಾಡಿದರು (ಎರಡನೆಯವರು). ಗ್ರಾಮೀಣ ಕುಟುಂಬದ ಶ್ರೀಧರ ಮೂರ್ತಿ, ಲೇಖಕ ಕೆ.ಎಸ್‌.ಪರಮೇಶ್ವರ, ರಂಗಕರ್ಮಿ ಸವಿತಾ, ಬಹುರೂಪಿ ಮುಖ್ಯಸ್ಥರಾದ ವಿ.ಎನ್‌. ಶ್ರೀಜಾ ಚಿತ್ರದಲ್ಲಿ ಇದ್ದಾರೆ
ಅಂಕಣಕಾರ ನಾಗೇಶ ಹೆಗಡೆ ಅವರು ಪುಸ್ತಕ ಬಿಡುಗಡೆ ಮಾಡಿದರು (ಎರಡನೆಯವರು). ಗ್ರಾಮೀಣ ಕುಟುಂಬದ ಶ್ರೀಧರ ಮೂರ್ತಿ, ಲೇಖಕ ಕೆ.ಎಸ್‌.ಪರಮೇಶ್ವರ, ರಂಗಕರ್ಮಿ ಸವಿತಾ, ಬಹುರೂಪಿ ಮುಖ್ಯಸ್ಥರಾದ ವಿ.ಎನ್‌. ಶ್ರೀಜಾ ಚಿತ್ರದಲ್ಲಿ ಇದ್ದಾರೆ   

ಬೆಂಗಳೂರು: ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟುಹಬ್ಬವನ್ನು ವಿನೂತನವಾಗಿ ಆಚರಿಸಲಾಯಿತು.

ತೇಜಸ್ವಿ ಅವರ 80ನೇ ಹುಟ್ಟುಹಬ್ಬದ ಅಂಗವಾಗಿ ಬಹುರೂಪಿ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆ.ಎಸ್‌.ಪರಮೇಶ್ವರ ಅವರ ‘ತೇಜಸ್ವಿ ಸಿಕ್ಕರು‘ ಕೃತಿಯನ್ನು ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅಂಕಣಕಾರ ನಾಗೇಶ ಹೆಗಡೆ, ‘ಕೊಳ್ಳುಬಾಕ ಸಂಸ್ಕೃತಿಯಿಂದ ಪರಿಸರ, ಜೀವ ವೈವಿಧ್ಯದ ಜೊತೆಗೆ ಕನ್ನಡವೂ ನಾಶವಾಗುತ್ತಿದೆ. ತೇಜಸ್ವಿ ಅವರು ಜಾಗತೀಕರಣ ವಿರುದ್ಧದ ಎಚ್ಚರ ಪ್ರಜ್ಞೆ’ ಎಂದು ಅವರು ಹೇಳಿದರು.

ADVERTISEMENT

‘ತೇಜಸ್ವಿ ಮೊಗೆದಷ್ಟೂ ಮುಗಿಯದ ಜ್ಞಾನ ಭಂಡಾರ. ನಾಳೆ ಬರುವ ಆತಂಕವನ್ನು ಅವರು ಇಂದೇ ಗುರುತಿಸುತ್ತಿದ್ದರು’ ಎಂದರು.

ಪತ್ರಕರ್ತ ಜಿ.ಎನ್‌.ಮೋಹನ್‌ ಮಾತನಾಡಿ, ‘ತೇಜಸ್ವಿ ಪ್ರತಿರೋಧದ ಸಂಕೇತ, ಕನ್ನಡಕ್ಕೆ ಯೂನಿಕೋಡ್‌ ಬೇಕು ಎಂದು ಪರಿಶ್ರಮ ಹಾಕಿದರು. ಹೊಸ ಪೀಳಿಗೆಯವರು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.