ಬೆಂಗಳೂರು: ‘ಗುರುಕುಲದಲ್ಲಿ ಗುರುಗಳು ಈಶಾವಾಸ್ಯ ಉಪನಿಷತ್ತಿನ ಶ್ಲೋಕಗಳನ್ನು ಹೇಳಿಕೊಡುವಾಗ ನನಗೆ ಅರ್ಥವಾಗುತ್ತಿರಲಿಲ್ಲ. ಕ್ರಮೇಣ ಅರ್ಥವಾಯಿತು. ಜನಸಾಮಾನ್ಯರಿಗೂ ಅರ್ಥವಾಗುವಂತೆ ಕನ್ನಡದಲ್ಲಿ ವ್ಯಾಖ್ಯಾನ ಮಾಡಿದ್ದೇನೆ’ ಎಂದು ಶಿಕ್ಷಣ ತಜ್ಞ ಗುರುರಾಜ ಕರಜಗಿ ಹೇಳಿದರು.
ತಮ್ಮ ಮೂರು ಕೃತಿಗಳಾದ ‘ಸಮರ್ಪಣಾ’ ಈಶಾವಾಸ್ಯ ಉಪನಿಷತ್ತು, ಬೆರಗಿನ ಬೆಳಕು ಭಾಗ–3 ಮತ್ತು ಭಾಗ–4 ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಗುರುಕುಲದಲ್ಲಿ ಈಶಾವಾಸ್ಯ ಉಪನಿಷತ್ತಿನ ಮಂತ್ರಗಳನ್ನು ಬಾಯಿಪಾಠ ಮಾಡಿದ್ದರಿಂದ ದೊಡ್ಡವನಾದ ಮೇಲೆ ಅವುಗಳು ನನ್ನನ್ನು ಕಾಡತೊಡಗಿದವು. ಇವುಗಳು ಎಲ್ಲರಿಗೂ ಅರ್ಥವಾಗುವಂತೆ ಮಾಡಬೇಕು ಎಂದು ಕನ್ನಡದಲ್ಲಿ ವ್ಯಾಖ್ಯಾನಿಸಿದ್ದೇನೆ. ಇದರಲ್ಲಿ ಒಳ್ಳೆಯದಿದ್ದರೆ ಅದು ನನ್ನ ಗುರುಗಳಿಗೆ ಸಲ್ಲುತ್ತದೆ. ತಪ್ಪಿದ್ದರೆ ಅದು ನನ್ನದು’ ಎಂದರು.
‘ಅಧಿಕಾರದಲ್ಲಿರುವವರು ತಮ್ಮ ಪಾಲಿನ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರೆ, ಸಮಾಜದಲ್ಲಿ ಭ್ರಷ್ಟಾಚಾರ ಕಡಿಮೆಯಾಗುತ್ತದೆ. ಸಿಕ್ಕಿರುವ ಅಧಿಕಾರದಿಂದ ಅಹಂಕಾರ ಪಡದೆ, ಜನಸೇವೆ ಮಾಡಬೇಕು’ ಎಂದು ನ್ಯಾಯಮೂರ್ತಿ ಶಿವರಾಜ ಪಾಟೀಲ್ ಹೇಳಿದರು.
ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಶಾಸಕ ಸಿ.ಟಿ. ರವಿ, ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.