ಬೆಂಗಳೂರು: ಸಂಶೋಧನೆ ಮತ್ತು ಕೌಶಲದ ಉನ್ನತೀಕರಣದಿಂದ ಹಲವಾರು ಅವಕಾಶಗಳು ಲಭಿಸುತ್ತವೆ ಎಂದು ಟೆಕ್ನಿಕಲ್ ಸೆಂಟರ್ ಇಂಡಿಯಾದ ಮುಖ್ಯಸ್ಥೆ ಲತಾ ಚೆಂಬ್ರಕಲಂ ಅಭಿಪ್ರಾಯಪಟ್ಟರು
ನಗರದ ಅರಮನೆ ಮೈದಾನದಲ್ಲಿ ನಡೆದ ಬೆಂಗಳೂರು ಟೆಕ್ ಶೃಂಗದಲ್ಲಿ ‘ಬ್ರೇಕಿಂಗ್ ಬೌಂಡರೀಸ್ ಟು ಅನ್‌ಬೌಂಡ್ ಆಪರ್ಚುನಿಟೀಸ್’ ಕುರಿತ ಚರ್ಚೆಯಲ್ಲಿ ಅವರು ಮಾತನಾಡಿದರು.
ದಶಕದ ಹಿಂದೆ ಜಾಗತಿಕ ನಾವೀನ್ಯ ಸೂಚ್ಯಂಕದಲ್ಲಿ 81ನೇ ಸ್ಥಾನದಲ್ಲಿದ್ದ ಭಾರತವು, ಈಗ 39ನೇ ಸ್ಥಾನದಲ್ಲಿದೆ. ಇದು ದೇಶದ ನಾವೀನ್ಯತಾ ಸಾಮರ್ಥ್ಯವನ್ನು ಸೂಚಿಸುತ್ತದೆ. ಇಂದಿನ ಜನರಲ್ಲಿ ತಂತ್ರಜ್ಞಾನ ಮತ್ತು ಕೌಶಲದ ಕೊರತೆಯಿದೆ. ಇದು ಅಭಿವೃದ್ಧಿಗೆ ಅಡ್ಡಿಯುಂಟು ಮಾಡುತ್ತಿದೆ. ಸರ್ಕಾರವು ಕೌಶಲ ಉನ್ನತೀಕರಣಗೊಳಿಸಲು ಕ್ರಮ ಕೈಗೊಳ್ಳಬೇಕಿದೆ ಎಂದರು.
5-ಜಿ, ಕೃತಕ ಬುದ್ಧಿಮತ್ತೆ ಸೇರಿ ತಂತ್ರಜ್ಞಾನವು ಇಂದು ವೇಗವಾಗಿ ಬೆಳೆಯುತ್ತಿದೆ. ಮಾರುಕಟ್ಟೆಯಲ್ಲಿ ಆಯ್ಕೆಗಳು ಹೆಚ್ಚುತ್ತಿವೆ. ಅದಕ್ಕೆ ಪೂರಕವಾದ ಅಂಶವನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. 2047ರ ವೇಳೆಗೆ ವಿಕಸಿತ ಭಾರತದ ಕನಸು ನನಸಾಗಲು ನಾವೀನ್ಯ, ಸಂಶೋಧನೆ, ಮೂಲಸೌಕರ್ಯ ವಲಯಗಳ ಮೇಲೆ ಹೆಚ್ಚು ವೆಚ್ಚ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಅಲ್ಕಾನ್ ಗ್ಲೋಬಲ್ ಸರ್ವಿಸಸ್‌ನ ವಿನೀತ್ ದ್ವಿವೇದಿ, ಫಿಲಿಪ್ಸ್ ಇನ್ನೋವೇಶನ್ ಕ್ಯಾಂಪಸ್ ಮುಖ್ಯಸ್ಥ ಅರವಿಂದ್ ವೈಷ್ಣವ್ ಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.