ಬೆಂಗಳೂರು: ಹೋಟೆಲ್‌ಗಳನ್ನು 24 ಗಂಟೆಯೂ ತೆರೆಯಲು ಅವಕಾಶ ನೀಡಬೇಕು ಎನ್ನುವುದೂ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ ಆಗ್ರಹಿಸಿದೆ.
ಹೋಟೆಲ್ ಉದ್ಯಮವನ್ನು ಸುಲಭವಾಗಿ ನಡೆಸಲು ಅನುಕೂಲವಾಗುವಂತೆ ಟ್ರೇಡ್ ಲೈಸೆನ್ಸ್ ಮತ್ತುಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್ಎಐ) ಪರವಾನಗಿಯನ್ನು ಒಂದೇ ಬಾರಿ ಶಾಶ್ವತವಾಗಿ ನೀಡಬೇಕು. ರಾಜ್ಯದಲ್ಲಿ ಈ ಉದ್ಯಮಕ್ಕೆ ಕೈಗಾರಿಕಾ ಮಾನ್ಯತೆ ಮತ್ತು ಕಾರ್ಮಿಕರ ವೃತ್ತಿಪರ ತೆರಿಗೆಯ ಸಂಬಳದ ಮಿತಿಯನ್ನು ₹15 ಸಾವಿರದಿಂದ ₹30 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದೆ.
ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಪುಡಿರೌಡಿಗಳು ಮತ್ತು ಗುಂಡಾಗಳನ್ನು ತಡೆಹಿಡಿಯಲು ಅಗತ್ಯ ಭದ್ರತೆ ಒದಗಿಸಬೇಕು. ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಸಮಯೋಜಿತವಾಗಿ ಪೂರ್ಣಗೊಳಿಸಬೇಕು ಎಂದು ಸಂಘದ ಅಧ್ಯಕ್ಷ ಪಿ.ಸಿ. ರಾವ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.