ಬೆಂಗಳೂರು: ‘ಬೌದ್ಧರ ಸರ್ವತೋಮುಖ ಅಭಿವೃದ್ಧಿಗೆ ‘ಕರ್ನಾಟಕ ರಾಜ್ಯ ಬೌದ್ಧರ ಅಭಿವೃದ್ಧಿ ಮಂಡಳಿ ಅಥವಾ ನಿಗಮ’ ರಚಿಸಬೇಕು’ ಎಂದು ಭಾರತೀಯ ಬೌದ್ಧ ಮಹಾಸಭಾದ ದಕ್ಷಿಣ ಕರ್ನಾಟಕ ರಾಜ್ಯ ಶಾಖೆ ಆಗ್ರಹಿಸಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ರಾಜ್ಯಾಧ್ಯಕ್ಷ ಶಿವರಾಜ್ ಎಂ.ಸಿ., ‘ಮಂಡಳಿ ಅಥವಾ ನಿಗಮ ರಚಿಸುವ ಮೂಲಕ ರಾಜ್ಯದ ಐತಿಹಾಸಿಕ ಶಿಲಾಶಾಸನಗಳು, ಸ್ಮಾರಕಗಳು ಹಾಗೂ ಬೌದ್ಧ ಸ್ಥೂಪಗಳನ್ನು ಸಂರಕ್ಷಣೆ ಮಾಡಬೇಕು. ಆಸಕ್ತರು ಬೌದ್ಧ ಧರ್ಮದ ಅನುಯಾಯಿಗಳಾದ ಬಳಿಕ ಅಧಿಕೃತವಾಗಿ ದೃಢಪಡಿಸಿಕೊಳ್ಳಲು ಬೌದ್ಧ ಧರ್ಮದ ಪ್ರತ್ಯೇಕ ಕಾಲಂ ನೀಡಬೇಕು. ಬುದ್ಧ ಜನ್ಮದಿನದಂದು ಜಯಂತಿ ಆಚರಿಸಿ, ಸರ್ಕಾರಿ ರಜೆ ಘೋಷಿಸಬೇಕು’ ಎಂದು ಆಗ್ರಹಿಸಿದರು.
‘ಬೌದ್ಧ ಧರ್ಮವನ್ನು ಪುನರುಜ್ಜೀವನಗೊಳಿಸಲು ರಾಜ್ಯದ ಮುಖ್ಯ ನಗರಗಳಲ್ಲಿ ಬುದ್ಧ ವಿಹಾರಗಳ ನಿರ್ಮಾಣಕ್ಕೆ 25 ಎಕರೆ, ಜಿಲ್ಲಾ ಕೇಂದ್ರಗಳಲ್ಲಿ 10 ಎಕರೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ 5 ಎಕರೆ ಭೂಮಿಯನ್ನು ಸರ್ಕಾರ ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.