ಬೆಂಗಳೂರು: ಬೆಂಗಳೂರು ಜಲಮಂಡಳಿಯ (24/7)ದೂರು ನಿರ್ವಹಣಾ ಕೇಂದ್ರದ ಟೋಲ್ ಫ್ರೀ ಸಂಖ್ಯೆ1916 ಅನ್ನು ಭಾನುವಾರದಂದು ಸ್ಥಗಿತಗೊಳಿಸಲಾಗುತ್ತಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ದೂರು ನಿರ್ವಹಣಾ ಕೇಂದ್ರದ ಸರ್ವರ್‌ನ ವಾರ್ಷಿಕ ನಿರ್ವಹಣೆ ಕೈಗೊಳ್ಳುತ್ತಿರುವ ಕಾರಣ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ತಾತ್ಕಾಲಿಕವಾಗಿ 1916 ಟೋಲ್ ಫ್ರೀ ಸಂಖ್ಯೆಯು ಕಾರ್ಯ ನಿರ್ವಹಿಸುವುದಿಲ್ಲ ಎಂದು ಜಲಮಂಡಳಿ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.