ADVERTISEMENT

ಬ್ಯಾಟರಾಯನಪುರ: ಕಾವೇರಿ ನೀರು ಸರಬರಾಜು ಸೇವೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 20:27 IST
Last Updated 24 ನವೆಂಬರ್ 2020, 20:27 IST
ಬ್ಯಾಟರಾಯನಪುರ ಕ್ಷೇತ್ರವ್ಯಾಪ್ತಿಯ ಸೆಂಟ್ರಲ್ ಎಕ್ಸೈಜ್ ಬಡಾವಣೆಗೆ ಕಾವೇರಿ ನೀರು ಸರಬರಾಜು ಸೇವೆಗೆ ಶಾಸಕ ಕೃಷ್ಣಬೈರೇಗೌಡ ಚಾಲನೆ ನೀಡಿದರು. ಕಾಂಗ್ರೆಸ್ ಮುಖಂಡರಾದ ಎಚ್.ಎ.ಶಿವಕುಮಾರ್. ಟಿ.ವೆಂಕಟರಾಮರೆಡ್ಡಿ, ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೇಣುಗೋಪಾಲ್, ಸ್ಥಳೀಯ ಮುಖಂಡ ಶಾಸ್ತ್ರಿ ಇದ್ದರು.

ಯಲಹಂಕ: ಬ್ಯಾಟರಾಯನಪುರ ಕ್ಷೇತ್ರವ್ಯಾಪ್ತಿಯ ಸೆಂಟ್ರಲ್ ಎಕ್ಸೈಜ್ ಬಡಾವಣೆಯಲ್ಲಿ ಕಾವೇರಿ ನೀರು ಸರಬರಾಜು ಸೇವೆಯನ್ನು ಶಾಸಕ ಕೃಷ್ಣ ಬೈರೇಗೌಡ ಉದ್ಘಾಟಿಸಿದರು.

‘ಕಾವೇರಿ ಮುಖ್ಯ ಕೊಳವೆಮಾರ್ಗ ಬಳಸಿಕೊಂಡು ಬಂದಿದ್ದ ಕಾರಣ, ಸೆಂಟ್ರಲ್ ಎಕ್ಸೈಜ್ ಬಡಾವಣೆ, ಶಿವರಾಮ ಕಾರಂತ ನಗರ, ಸೂರ್ಯೋದಯ, ಬಾಲಾಜಿ ಕೃಪಾ ಸೇರಿದಂತೆ ಸುತ್ತಮುತ್ತಲ ಏಳೆಂಟು ಬಡಾವಣೆಗಳಿಗೆ ನೀರಿನ ಸಂಪರ್ಕ ಇರಲಿಲ್ಲ. ಈ ದಿಸೆಯಲ್ಲಿ ಪ್ರತ್ಯೇಕವಾಗಿ ₹ 3 ಕೋಟಿ ವೆಚ್ಚದಲ್ಲಿ ನೇರವಾಗಿ ಪೈಪ್‌ಲೈನ್ ಅಳವಡಿಸಿದ ನಂತರ ನೀರು ಸರಬರಾಜು ಮಾಡಲು ಸಾಧ್ಯವಾಗಿದೆ’ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

‘ಪ್ರತಿವರ್ಷ ಇಲ್ಲಿ ಕೊಳವೆಬಾವಿಗಳು ವಿಫಲವಾಗುತ್ತಿದ್ದವು. ಹಾಗಾಗಿ, ಈ ಭಾಗದ ಜನರು, ನೀರಿನ ಬವಣೆ ಅನುಭವಿಸುತ್ತಿದ್ದರು. ಇದಕ್ಕೆ ಈಗ ಶಾಶ್ವತ ಪರಿಹಾರ ಸಿಕ್ಕಿದೆ. 1 ಸಾವಿರ ಮನೆಗಳಿಗೆ ಅನುಕೂಲವಾಗಲಿದೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.