ADVERTISEMENT

ಯಲಹಂಕ: ₹2.50 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2022, 19:53 IST
Last Updated 26 ಮಾರ್ಚ್ 2022, 19:53 IST
ಕೃಷ್ಣಬೈರೇಗೌಡ
ಕೃಷ್ಣಬೈರೇಗೌಡ   

ಯಲಹಂಕ: ಬ್ಯಾಟರಾಯನಪುರ ಕ್ಷೇತ್ರವ್ಯಾಪ್ತಿಯ ಜಕ್ಕೂರು ಹಾಗೂ ಮರಿಯಣ್ಣಪಾಳ್ಯದಲ್ಲಿ ₹2.50 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೃಷ್ಣಬೈರೇಗೌಡ ಅವರು ಚಾಲನೆ ನೀಡಿದರು.

ಜಕ್ಕೂರು ಬಡಾವಣೆಯ ಶ್ರೀರಾಮ ವಿದ್ಯಾಲಯದಿಂದ ಜಕ್ಕೂರು ಗ್ರಾಮದ ಅಂಬೇಡ್ಕರ್ ಭವನದವರೆಗೆ ₹1.50 ಕೋಟಿ ಮತ್ತು ₹1 ಕೋಟಿ ವೆಚ್ಚದಲ್ಲಿ ಮರಿಯಣ್ಣಪಾಳ್ಯದ ಮರಿಯಾ ಸ್ಟ್ರೀಟ್ ಹಾಗೂ ನಾಗವಾರ ಕೆರೆಕೊಡಿ ಪಕ್ಕದ ಸೇಂಟ್ ಪ್ರ್ಯಾಂಕ್ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಕೃಷ್ಣಬೈರೇಗೌಡ, ‘ಬಿಬಿಎಂಪಿಗೆ ನೂತನವಾಗಿ ಸೇರ್ಪಡೆಯಾದ ಗ್ರಾಮಗಳಿಗೆ ಕಾವೇರಿ ನೀರು ಪೂರೈಕೆಮಾಡುವ ಸಲುವಾಗಿ ಜಲಮಂಡಳಿ ವತಿಯಿಂದ ಕಾವೇರಿ 5ನೇ ಹಂತದ ಯೋಜನೆಯಡಿ ಜಕ್ಕೂರು ಬಡಾವಣೆಯಿಂದ ಚೊಕ್ಕನಹಳ್ಳಿಯವರೆಗೆ ಬೃಹತ್ ಕೊಳವೆ ಮಾರ್ಗ ಅಳವಡಿಸುವ ಕಾಮಗಾರಿ ಕೈಗೊಳ್ಳಲಾಗಿತ್ತು. ಇದರಿಂದ ರಸ್ತೆಯು ಹಾಳಾಗಿ ಜನರು ತೊಂದರೆ ಅನುಭವಿಸುತ್ತಿದ್ದರು. ಈಗ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಗಿದ್ದು, ಶೀಘ್ರದಲ್ಲೇ ಸಮಸ್ಯೆ ನಿವಾರಣೆಯಾಗಲಿದೆ’ ಎಂದು ತಿಳಿಸಿದರು.

ADVERTISEMENT

ಬಿಬಿಎಂಪಿ ಮಾಜಿ ಸದಸ್ಯ ಪಿ.ವಿ.ಮಂಜುನಾಥಬಾಬು, ಕಾಂಗ್ರೆಸ್ ಮುಖಂಡರಾದ ರವಿಗೌಡ, ಶ್ರೀನಿವಾಸ್, ಕುಮಾರ್, ಮುನಿರಾಜು, ಗೌರೀಶ್, ಡಿ.ಬಿ.ಸುರೇಶ್ ಗೌಡ, ಡಿ.ಸಿ.ಮುನಿರಾಜು, ಡಿ.ಸಿ.ಮುನಿಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.