ಬೆಂಗಳೂರು: ಕೇಂದ್ರ ಸರ್ಕಾರವು ತೆರಿಗೆ–ಸುಂಕ ಹಾಗೂ ಸಹಾಯಾನುದಾನದ ರೂಪದಲ್ಲಿ ಕರ್ನಾಟಕಕ್ಕೆ ನ್ಯಾಯಯುತವಾಗಿ ನೀಡಬೇಕಾದ ಪಾಲು ವರ್ಷದಿಂದ ವರ್ಷಕ್ಕೆ ಇಳಿಯುತ್ತಿದ್ದು, ಒಂದೇ ವರ್ಷದಲ್ಲಿ ₹9,225 ಕೋಟಿ ಕಡಿಮೆಯಾಗಿದೆ.
‘2019–20ರ ಸಾಲಿಗೆ ಹೋಲಿಸಿ ದರೆ 2020–21ರಲ್ಲಿ ತೆರಿಗೆ–ಸುಂಕದ ಪಾಲಿನಲ್ಲಿ ಶೇ 29.84ರಷ್ಟು ಹಾಗೂ ಸಹಾಯಾನುದಾನದಲ್ಲಿ ಶೇ 12.77 ಕಡಿಮೆಯಾಗಿದೆ’ ಎಂದು ಭಾರತೀಯ ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ.
‘2021ರ ಮಾರ್ಚ್‌ಗೆ ಕೊನೆ ಗೊಂಡ ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳ ಲೆಕ್ಕ ಪರಿಶೋಧನಾ ವರದಿ’ಯಲ್ಲಿ ಈ ಅಂಶ ಪ್ರಸ್ತಾಪಿಸಲಾಗಿದೆ. ಈ ವರದಿಯನ್ನು ವಿಧಾನಮಂಡಲದಲ್ಲಿ ಬುಧವಾರ ಮಂಡಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.