ADVERTISEMENT

‘ಆರ್ಟ್ ಫಾರ್ ಹೋಪ್’ಗೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 15:51 IST
Last Updated 27 ಅಕ್ಟೋಬರ್ 2024, 15:51 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಹೂಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (ಎಚ್ಎಂಐಎಲ್) ಇದರ ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್ಆರ್) ಅಂಗವಾದ ಹೂಂಡೈ ಮೋಟಾರ್ ಇಂಡಿಯಾ ಫೌಂಡೇಷನ್ (ಐಎಫ್) ಸಿಎಸ್ಆರ್ ಯೋಜನೆಯ ಅಂಗವಾಗಿ ‘ಆರ್ಟ್ ಫಾರ್ ಹೋಪ್’ನ 4ನೇ ಆವೃತ್ತಿಯನ್ನು ಆರಂಭಿಸಿದೆ. ಪ್ರತಿಭಾವಂತ ಕಲಾವಿದರನ್ನು ಬೆಳಕಿಗೆ ತರುವ ಈ ಯೋಜನೆಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.

ಹಿಂದಿನ ಮೂರು ಆವೃತ್ತಿಗಳಲ್ಲಿ ಈ ಯೋಜನೆಯ ಮೂಲಕ 100ಕ್ಕೂ ಹೆಚ್ಚು ಕಲಾವಿದರು ಮತ್ತು ಕಲಾ ತಂಡಗಳಿಗೆ ಒಟ್ಟು ₹1.05 ಕೋಟಿ ಪ್ರೋತ್ಸಾಹಧನ ನೀಡಲಾಗಿದೆ. ಈ ವರ್ಷ ಚಿತ್ರಕಲೆ, ಶಿಲ್ಪಕಲೆ, ಡಿಜಿಟಲ್ ಕಲೆ, ಪ್ರದರ್ಶನ ಕಲೆ, ಸಂಗೀತ ಕಲೆ ಮತ್ತು ಸಾಂಪ್ರದಾಯಿಕ ಕರಕುಶಲ ಕಲೆಗಳನ್ನು ಪ್ರದರ್ಶಿಸಲು ಅವಕಾಶ ನೀಡಲಾಗಿದೆ ಎಂದು ಹೂಂಡೈ ಕಾರ್ಪೊರೇಟ್ ಕಮ್ಯುನಿಕೇಷನ್ ಮುಖ್ಯಸ್ಥ ಪುನೀತ್ ಆನಂದ್ ತಿಳಿಸಿದ್ದಾರೆ.

ADVERTISEMENT

ನ.10ರ ಒಳಗೆ ಅರ್ಜಿ ಸಲ್ಲಿಸಬೇಕು. ನವೆಂಬರ್‌–ಡಿಸೆಂಬರ್‌ ಯೋಜನೆ ಅನುಷ್ಠಾನದ ಅವಧಿಯಾಗಿದೆ. 2025ರ ಆರಂಭದಲ್ಲಿ ಪ್ರೋತ್ಸಾಹಧನ ವಿತರಣೆ ಮಾಡಲಾಗುವುದು. ಅಂಗವಿಕಲ ಕಲಾವಿದರೂ ಸೇರಿದಂತೆ ಒಟ್ಟು 40 ಕಲಾವಿದರಿಗೆ ತಲಾ ₹ 1 ಲಕ್ಷ ಪ್ರೋತ್ಸಾಹಧನ ನೀಡಲಾಗುವುದು. 10 ಸಮೂಹ ಸಂಸ್ಥೆಗಳಿಗೆ ₹2 ಲಕ್ಷ ನೀಡಲಾಗುವುದು. ಜೊತೆಗೆ ಆಯ್ದ ಕಲಾವಿದರು ಮತ್ತು ಕಲಾ ಸಮೂಹಗಳಿಗೆ ಆರ್ಥಿಕ ನೆರವು ಮತ್ತು ಮಾರ್ಗದರ್ಶನ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಕಲಾವಿದರು hyundaiartforhope.com ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಬಹುದು. ಯೋಜನಾ ನಾಮನಿರ್ದೇಶನಗಳನ್ನು ಸಲ್ಲಿಸಬಹುದು. ಮಾಹಿತಿಗಾಗಿ contactus@hyundaiartforhope.comಗೆ ಇ–ಮೇಲ್ ಕಳಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.