ಕೆ.ಆರ್.ಪುರ: ‘ವಿದ್ಯಾರ್ಥಿಗಳು ಗುರಿ ಸಾಧನೆಗಾಗಿ ಕಠಿಣ ಪರಿಶ್ರಮದೊಂದಿಗೆ ಅಧ್ಯಯನ ಮಾಡಬೇಕು’ ಎಂದು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಡಾ.ಎಸ್.ವಿದ್ಯಾಶಂಕರ್ ಸಲಹೆ ನೀಡಿದರು.
ಕೆ.ಆರ್.ಪುರ ಕೇಂಬ್ರಿಡ್ಜ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 14ನೇ ಪದವಿ ಪ್ರಧಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
’ಮನುಷ್ಯನಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಛಲದೊಂದಿಗೆ ಅಂದುಕೊಂಡದನ್ನು ಸಾಧಿಸಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಮತ್ತು ಸಾಧನೆ ಮಾಡಲು ಕಠಿಣ ಶ್ರಮದಿಂದ ಓದಬೇಕು’ ಎಂದು ಕಿವಿ ಮಾತು ಹೇಳಿದರು.
ಇಸ್ರೊ ಪ್ರಾಧ್ಯಾಪಕ ಡಾ.ಪಿ.ಜಿ.ದಿವಾಕರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಿಇ, ಎಂಟೆಕ್, ಎಂಬಿಎ, ಎಂಸಿಎ ಹಾಗೂ ಪಿಎಚ್.ಡಿ ಪದವಿ ಪೂರ್ಣಗೊಳಿಸಿದ ಕಾಲೇಜಿನ 739ಕ್ಕೂ ಹೆಚ್ಚು ಪದವೀಧರರಿಗೆ ಪದವಿ ಪ್ರಧಾನ ಮಾಡಲಾಯಿತು. ಕಾಲೇಜಿನ ಅಧ್ಯಕ್ಷ ಡಿ.ಕೆ.ಮೋಹನ್, ಕೇಂಬ್ರಿಡ್ಜ್ ಸಂಸ್ಥೆಯ ಸಲಹೆಗಾರ ಡಾ.ಕೆ.ಎನ್ ಬಾಲಸುಬ್ರಮಣ್ಯಮೂರ್ತಿ, ಪ್ರಾಂಶುಪಾಲರಾದ ಇಂದುಮತಿ, ಸಿಇಒ ನಿತಿನ್ ಮೋಹನ್, ರಿಜಿಸ್ಟ್ರಾರ್ ಡಾ.ವಾಮನ್ ಗುಡಿ ಕಾರ್ಯಮದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.