ADVERTISEMENT

ಪಾರ್ಶ್ವವಾಯು ನಿರ್ವಹಣೆಗೆ ಅಭಿಯಾನ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2024, 15:55 IST
Last Updated 13 ಅಕ್ಟೋಬರ್ 2024, 15:55 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಪಾರ್ಶ್ವವಾಯು ತಡೆಗಟ್ಟುವಿಕೆ, ಚಿಕಿತ್ಸೆ ಮತ್ತು ‌ಪುನರ್ವಸತಿಗೆ ಸಂಬಂಧಿಸಿದಂತೆ ಇಂಡಿಯನ್ ಸ್ಟ್ರೋಕ್ ಅಸೋಸಿಯೇಷನ್ ನಗರದಲ್ಲಿ ‘ಮಿಷನ್ ಬ್ರೈನ್ ಅಟ್ಯಾಕ್’ ಅಭಿಯಾನ ಪ್ರಾರಂಭಿಸಿದೆ.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಸಲಹೆಗಾರರೂ ಆಗಿರುವ ನರವಿಜ್ಞಾನ ಮತ್ತು ಪಾರ್ಶ್ವವಾಯು ತಜ್ಞ ಡಾ. ಅಮಿತ್ ಕುಲಕರ್ಣಿ, ‘ಪಾರ್ಶ್ವವಾಯು ಸಮಸ್ಯೆಯು ಅಂಗವಿಕಲತೆ ಹಾಗೂ ಅಕಾಲಿಕ ಮರಣಕ್ಕೆ ಕಾರಣವಾಗುತ್ತಿದೆ. ದೇಶದಲ್ಲಿ ವಾರ್ಷಿಕ ಸುಮಾರು 18 ಲಕ್ಷ ಜನರ ಮೇಲೆ ಈ ಸಮಸ್ಯೆ ಪರಿಣಾಮ ಬೀರುತ್ತದೆ. ಸಾವಿಗೆ ಎರಡನೇ ಸಾಮಾನ್ಯ ಕಾರಣ ಹಾಗೂ ಅಂಗವಿಕಲತೆಗೆ ಮೂರನೇ ಪ್ರಮುಖ ಕಾರಣವಾಗಿದೆ. ಈ ‍ರೋಗದ ಬಗ್ಗೆ ಜನರಲ್ಲಿ ಅರಿವಿನ ಕೊರತೆಯಿದೆ. ಆದ್ದರಿಂದ ಈ ಬಗ್ಗೆ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ರೋಗ ಲಕ್ಷಣಗಳನ್ನು ಗುರುತಿಸುವ ಜೊತೆಗೆ ಪರಿಣಾಮಕಾರಿ ಚಿಕಿತ್ಸೆ ಒದಗಿಸಲು ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ಒದಗಿಸಲಾಗುತ್ತದೆ’ ಎಂದು ತಿಳಿಸಿದರು. 

ADVERTISEMENT

‘ಪಾರ್ಶ್ವವಾಯು ಪೀಡಿತರಿಗೆ ನಿಗದಿತ ಅವಧಿಯೊಳಗೆ ಚಿಕಿತ್ಸೆ ಒದಗಿಸಬೇಕಿದೆ. ಈ ಸಂಬಂಧ ಸಮಗ್ರ ಚಿಕಿತ್ಸೆಯನ್ನು ವಿನ್ಯಾಸ ಮಾಡಲಾಗಿದೆ. ಈ ಅಭಿಯಾನವು ಕಾರ್ಯಾಗಾರ, ವಿಚಾರಗೋಷ್ಠಿಯನ್ನೂ ಒಳಗೊಂಡಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.