ಬೆಂಗಳೂರು: ಶೌಚಾಲಯ ಸ್ವಚ್ಛತೆಗೆ ಬಳಸುವ ಲೈಜಾಲ್ ಹಾಗೂ ಹಾರ್ಪಿಕ್‌ಗಳ ನಕಲಿ ಉತ್ಪನ್ನ ತಯಾರಿಕಾ ಗೋದಾಮಿನ ಮೇಲೆ ಸಿಸಿಬಿ ಮತ್ತು ಜೀವನ್‌ಬಿಮಾ ನಗರ ಠಾಣೆ ಪೊಲೀಸರು ದಾಳಿ ನಡೆಸಿ ಅಪಾರ ಪ್ರಮಾಣದ ನಕಲಿ ಉತ್ಪನ್ನಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಅನಿಲ್ ಪಟೇಲ್ ಮತ್ತು ಅನಂತ್ ಪಟೇಲ್ ಎಂಬವರನ್ನು ಬಂಧಿಸಲಾಗಿದೆ. ಜೀವನ್‌ಬಿಮಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳು ನಗರದ ಹೊರವಲಯದ ಆವಲಹಳ್ಳಿಯಲ್ಲಿ ಕಂಪನಿಗಳ ಹೆಸರಿನಲ್ಲಿ ಸ್ವಚ್ಛತಾ ಉತ್ಪನ್ನಗಳನ್ನು ತಯಾರಿಸಿ, ಅವುಗಳಿಗೆ ಅಸಲಿ ಕಂಪನಿಯ ಸ್ಟಿಕರ್ ಅಂಟಿಸಿ ಮಾರಾಟ ಮಾಡುತ್ತಿದ್ದರು.
ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿ ನಕಲಿ ಲೈಜಾಲ್, ಹಾರ್ಪಿಕ್, ವಿಮ್ ಲಿಕ್ವೀಡ್‌ಗಳು ಹಾಗೂ ಎರಡು ಸರಕು ಸಾಗಣೆ ವಾಹನಗಳು, ತಯಾರಿಕಾ ಉಪಕರಣಗಳು ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.