ADVERTISEMENT

ಬೆಂಗಳೂರು ಟರ್ಫ್‌ಕ್ಲಬ್‌ ಮೇಲೆ ಸಿಸಿಬಿ ದಾಳಿ: ₹3 ಕೋಟಿ ನಗದು ಜಪ್ತಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2024, 21:08 IST
Last Updated 12 ಜನವರಿ 2024, 21:08 IST
<div class="paragraphs"><p>ಸಿಸಿಬಿ ಸಂಗ್ರಹ ಚಿತ್ರ </p></div>

ಸಿಸಿಬಿ ಸಂಗ್ರಹ ಚಿತ್ರ

   

ಬೆಂಗಳೂರು: ಬೆಂಗಳೂರು ಟರ್ಫ್‌ಕ್ಲಬ್‌ನ ಬುಕ್‌ ಮೇಕರ್‌ಗಳ ಮೇಲೆ‌ ಶುಕ್ರವಾರ ದಾಳಿ ನಡೆಸಿದ ಕೇಂದ್ರ ಅಪರಾಧ ವಿಭಾಗದ ಪೊಲೀಸರು, ಶೋಧ ನಡೆಸಿದರು.

‘ಜಿಎಸ್‌ಟಿ ಪಾವತಿಸದೆ ವಂಚನೆ, ಅಕ್ರಮ ಬೆಟ್ಟಿಂಗ್‌, ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಟಿಕೆಟ್‌ ಮಾರಾಟದ ಬಗ್ಗೆ ದೂರು ಬಂದಿತ್ತು. ದೂರು ಆಧರಿಸಿ ದಾಳಿ ನಡೆಸಲಾಯಿತು. ₹3 ಕೋಟಿಗೂ ಅಧಿಕ ನಗದು ಜಪ್ತಿ ಮಾಡಿಕೊಳ್ಳಲಾಗಿದೆ. ಕೌಂಟರ್‌ಗಳಲ್ಲಿ ತಪಾಸಣೆ ನಡೆಸಲಾಯಿತು. ರೇಸ್‌ಕೋರ್ಸ್‌ ಸಿಬ್ಬಂದಿ ವಿಚಾರಣೆ ನಡೆಸಲಾಯಿತು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.‌

ADVERTISEMENT

‘ವಿಕ್ರಾಂತ್ ಎಂಟರ್ ಪ್ರೈಸಸ್, ನಿರ್ಮಲ್ ಅಂಡ್ ಕೋ, ಚಾಮುಂಡೇಶ್ವರಿ ಎಂಟರ್ ಪ್ರೈಸಸ್, ಶ್ರೀರಾಮ ಎಂಟರ್ ಪ್ರೈಸಸ್, ಆರ್.ಆರ್.ಎಂಟರ್ ಪ್ರೈಸಸ್, ರಾಯಲ್ ಇಎನ್‌ಟಿಪಿ, ಆರ್.ಕೆ.ಎಂಟರ್ ಪ್ರೈಸಸ್, ಎಎ ಅಸೋಸಿಯೇಟ್ಸ್‌, ಸಾಮ್ರಾಟ್ ಅಂಡ್ ಕೋ, ಮೆಟ್ರೊ ಅಸೋಸಿಯೇಟ್ಸ್‌ ಸೇರಿದಂತೆ ಹಲವು ಕೌಂಟರ್‌ಗಳಲ್ಲಿ ಪರಿಶೀಲನೆ ನಡೆಸಲಾಯಿತು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘5ನೇ ರೇಸ್ ವೇಳೆ ಸಿಸಿಬಿ ದಾಳಿ ನಡೆಯಿತು. ಹೀಗಾಗಿ ಕೊನೆಯ ಮೂರು ರೇಸ್‌ಗಳಿಗೆ ಬುಕ್ಕಿಗಳಿಂದ ಬೆಟ್ಟಿಂಗ್‌ ಇರುವುದಿಲ್ಲ’ ಎಂದು ಟರ್ಫ್‌ಕ್ಲಬ್‌ ‍ಪ್ರಕಟಿಸಿತು. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.