ADVERTISEMENT

ಸಮುದಾಯದವರಿಗೆ 5 ಕೃಪಾಂಕ ತಪ್ಪಲ್ಲ: ಡಿ.ವಿ.ಸದಾನಂದ ಗೌಡ

ಒಕ್ಕಲಿಗ ಸಮಾಜದ ಸಚಿವರು, ಅಧಿಕಾರಿಗಳಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 20:44 IST
Last Updated 16 ಫೆಬ್ರುವರಿ 2020, 20:44 IST
ಕಾರ್ಯಕ್ರಮದಲ್ಲಿ ಒಕ್ಕಲಿಗ ಸಮುದಾಯದ ಸಚಿವರಾದ (ಕುಳಿತವರು ಎಡದಿಂದ) ಕೆ.ಗೋಪಾಲಯ್ಯ, ಸಿ.ಟಿ. ರವಿ, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಉಪಮುಖ್ಯಮಂತ್ರಿ ಸಿ.ಎನ್‌. ಅಶ್ವತ್ಥನಾರಾಯಣ, ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್‌ ಅವರನ್ನು ಸನ್ಮಾನಿಸಲಾಯಿತು. ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸ್ಪಟಿಕಪುರಿ ಗುರುಗುಂಡ ಬ್ರಹ್ಮೇಶ್ವರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್.ರಂಗಪ್ಪ ಇದ್ದರು -   –ಪ್ರಜಾವಾಣಿ ಚಿತ್ರ

ಬೆಂಗಳೂರು: ‘ನಾವು ಜಾತಿವಾದ ಮಾಡುವುದಿಲ್ಲ. ಆದರೆ, ಅವಕಾಶ ಸಿಕ್ಕಾಗನಮ್ಮ ಸಮುದಾಯದವರಿಗೆ5 ಕೃಪಾಂಕ ನೀಡಿ ಮೇಲಕ್ಕೆ ತರುವುದರಲ್ಲಿ ತಪ್ಪಿಲ್ಲ’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದರು.

ಚುಂಚಶ್ರೀ ಬಳಗವು ನಗರದಲ್ಲಿ ಆಯೋಜಿಸಿದ್ದ‌ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಒಕ್ಕಲಿಗ ಸಮುದಾಯವು ನಮ್ಮ ಹಿಂದೆ ನಿಂತಾಗ ನಾವು ಕೂಡ ಸಮುದಾಯದ ಒಳಿತಿಗೆ ಶ್ರಮಿಸಬೇಕು’ ಎಂದರು.

‘ನಾನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದಾಗ ಹಲವಾರು ಮಂದಿಪ್ರತಿಭಟನೆ ನಡೆಸಿದ್ದರು.ನಂಜಾವಧೂತ ಸ್ವಾಮೀಜಿ ಕೂಡ ನನ್ನ ಪರ ಧ್ವನಿಯೆತ್ತಿದ್ದರು’ ಎಂದು ಸ್ಮರಿಸಿದರು.

ADVERTISEMENT

‘ಅಧಿಕಾರದಲ್ಲಿ ಇರುವವರು ವೃತ್ತಿಪರತೆ, ಕ್ರಿಯಾಶೀಲತೆ,ಅಂತಃಕರಣ, ದೂರದೃಷ್ಟಿ ಹಾಗೂ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರಬೇಕು’ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ, ‘ಜಾತಿ ನಮ್ಮ ಗುರುತನ್ನು ಸಾರುತ್ತದೆ. ಅದನ್ನು ಬಿಟ್ಟು ಬದುಕಲು ಯಾರಿಂದಲೂ ಸಾಧ್ಯವಿಲ್ಲ. ಹಾಗಂತ ಜಾತೀಯತೆ ಮಾಡಿ, ಇನ್ನೊಬ್ಬರನ್ನು ತುಳಿಯಬಾರದು. ಹಿಂದು

ಸಮಾಜ ನಮ್ಮ ದೇಹವಾದರೇ, ಜಾತಿ ಅಂಗಾಂಗ. ಸಾಧನೆಯ ದಿಯಲ್ಲಿರುವವರಿಗೆ ನಾವು ಏಣಿಯಾಗಿ ಮುಂದೆ ತಳ್ಳಬೇಕು. ಏಡಿಯಂತೆ ಮೇಲಕ್ಕೆ ಹೋದವರನ್ನು ಎಳೆಯುವ ಕೆಲಸವನ್ನು ಎಂದಿಗೂ ಮಾಡಬಾರದು’ ಎಂದು ಹೇಳಿದರು.

ಸಚಿವರಾದ ಕೆ.ಗೋಪಾಲಯ್ಯ, ಸಿ.ಟಿ. ರವಿ,ಕೆ. ಸುಧಾಕರ್‌, ಎಸ್.ಟಿ.ಸೋಮಶೇಖರ್, ನಾರಾಯಣ ಗೌಡ,ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹಾಗೂ ಉಪಮುಖ್ಯಮಂತ್ರಿ ಸಿ.ಎನ್‌. ಅಶ್ವತ್ಥನಾರಾಯಣ ಅವರನ್ನು ಸನ್ಮಾನಿಸಲಾಯಿತು. ಒಕ್ಕಲಿಗ ಸಮಾಜದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಗೌರವಿಸಲಾಯಿತು.

ನಗುಮೊಗ: ಗೌಡರ ಸಮರ್ಥನೆ
‘ತಾನೇಕೆ ಸದಾ ನಗುಮೊಗವನ್ನು ಹೊಂದಿರುತ್ತೇನೆ’ ಎಂಬ ಬಗ್ಗೆ ಡಿ.ವಿ.ಸದಾನಂದ ಗೌಡ ವಿವರಿಸಿದರು.

‘ನನ್ನ ನಗುವನ್ನು ಅಪಹಾಸ್ಯ ಮಾಡುವ ಕೆಲವರು,‘ಅವರು ಏನಕ್ಕೂ ಪ್ರಯೋಜನವಿಲ್ಲ’ ಎಂದು ಆಡಿಕೊಳ್ಳಬಹುದು. ಆದರೆ, ನಗುವಿನ ಹಿಂದಿನ ಶಕ್ತಿ ಹಾಗೂ ಪ್ರಯೋಜನದ ಬಗ್ಗೆ ನನಗೆ ಅರಿವಿದೆ’ ಎಂದರು.

‘ಸಮಸ್ಯೆಗಳೊಂದಿಗೆ ಬರುವವರ ಮುಂದೆ ಗಂಟು ಮುಖ ಹಾಕಿಕೊಂಡರೆ ಅವರ ಆತ್ಮವಿಶ್ವಾಸ ಇನ್ನಷ್ಟು ಕುಗ್ಗುತ್ತದೆ. ಪ್ರತಿಯೊಬ್ಬರಿಗೂ ಸಮಯ ಮತ್ತು ನಗು ಮುಖ್ಯ. ಇವೆರಡನ್ನೂ ಸರಿಯಾಗಿ ಹೊಂದಿಸಿಕೊಂಡು ಹೋಗುವವನು ಯಶಸ್ವಿಯಾಗುತ್ತಾನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.