ಬೆಂಗಳೂರು: ಸಿಇಟಿ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ ಹೊರನಾಡು, ಗಡಿನಾಡು, ಮಾಜಿ ಸೈನಿಕರು ಸೇರಿದಂತೆ ವಿಶೇಷ ಅರ್ಹತಾ ವಲಯದ ಅಭ್ಯರ್ಥಿಗಳ ದಾಖಲಾತಿ ಪರಿಶೀಲನಾ ಕಾರ್ಯ ಜುಲೈ 18ರಿಂದ 21ರವರೆಗೆ ನಡೆಯಲಿದೆ.
4 ದಿನಗಳು ಬೆಳಿಗ್ಗೆ 9.30ರಿಂದ ದಾಖಲಾತಿ ಪರಿಶೀಲನಾ ಕಾರ್ಯ ಆರಂಭವಾಗಲಿದೆ. ಹಾಜರಾಗುವ ಅಭ್ಯರ್ಥಿಗಳು ಮೂಲ ದಾಖಲೆಗಳ ಜತೆಗೆ ನಕಲು ಪ್ರತಿ ತರಬೇಕು. ಮಾಹಿತಿಗೆ ಪ್ರಾಧಿಕಾರದ ಜಾಲತಾಣ http:// kea.kar.nic.in ವೀಕ್ಷಿಸಬಹುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಹೇಳಿದ್ದಾರೆ.
ಎನ್‌ಎಟಿಎ ಅಂಕ ಸಲ್ಲಿಕೆಗೆ ಮತ್ತೊಮ್ಮೆ ಅವಕಾಶ: ವಾಸ್ತುಶಿಲ್ಪಶಾಸ್ತ್ರ ಕೋರ್ಸ್‌ಗೆ ಪ್ರವೇಶ ಬಯಸುವವರು ಎನ್‌ಎಟಿಎ–1 (ವಾಸ್ತುಶಿಲ್ಪ ಶಾಸ್ತ್ರ ಪ್ರವೇಶ ಪರೀಕ್ಷೆ) ಅಥವಾ ಎನ್‌ಎಟಿಎ-2 ಪರೀಕ್ಷೆಗಳಲ್ಲಿ ಗಳಿಸಿರುವ ಅಂಕಗಳನ್ನು ನಮೂದಿಸಲು ಜುಲೈ 5ರ ಬೆಳಿಗ್ಗೆ 11ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.