ADVERTISEMENT

ಜೆಇಇ: ಚೈತನ್ಯ ಸಂಸ್ಥೆ ವಿದ್ಯಾರ್ಥಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 15:10 IST
Last Updated 25 ಏಪ್ರಿಲ್ 2024, 15:10 IST
ಚಿರಾಗ್ ವಿ. ಗೌಡ
ಚಿರಾಗ್ ವಿ. ಗೌಡ   

ಬೆಂಗಳೂರು: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ಜಂಟಿ ಪ್ರವೇಶ ಪರೀಕ್ಷೆಯಲ್ಲಿ (ಜೆಇಇ-ಮೇನ್ಸ್‌) ಶ್ರೀ ಚೈತನ್ಯ ಎಜುಕೇಶನಲ್ ಇನ್‌ಸ್ಟಿಟ್ಯೂಷನ್ಸ್ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. 

ಅನಿಮೇಶ್ ಸಿಂಗ್ ಅಖಿಲ ಭಾರತ ಮಟ್ಟದಲ್ಲಿ (ಎಐಆರ್‌) ಎರಡನೇ ರ್‍ಯಾಂಕ್ ಪಡೆದರೆ, ಮನೋಜ್ ಸೋಹನ್ ಗಜುಲಾ 96, ಅರ್ಮಾನ್ ಸಿಂಗಲ್ 542, ಆಯುಷ್ ರೈ 552, ಚಿರಾಗ್ ವಿ. ಗೌಡ 572, ಜಗದೀಶ್ ರೆಡ್ಡಿ ಎಂ. 668, ರೋಹಿತ್ ರಾಜೀವ್ ನಂಬಿಯಾರ್ 696, ವೇದ್ ಬನ್ಸಾಲ್ 701, ಎಂ. ಲಿಲಿತ್ ಚಂದನ್ 736, ಶಶಾಂಗ್ ಡಿ.ಆರ್. 738, ಆಕಾಶ್ ಕುಮಾರ್ 757, ಆದಿತ್ಯ ಎ. 796, ರಾಹುಲ್ ರಾವ್ 809, ಗೌತಮ್ ತಥಾಂಡ 824 ಹಾಗೂ ಆಯುಷ್ ಅಗರ್ವಾಲ್ 836 ರ್‍ಯಾಂಕ್ ಪಡೆದಿದ್ದಾರೆ. 

ಸಂಸ್ಥೆಯ 15 ವಿದ್ಯಾರ್ಥಿಗಳು ಸಾವಿರದೊಳಗೆ ರ್‍ಯಾಂಕ್ ಪಡೆದರೆ, 810 ಅಭ್ಯರ್ಥಿಗಳು ‘ಜೆಇಇ ಅಡ್ವಾನ್ಸ್ಡ್‌’ಗೆ ಅರ್ಹತೆ ಪಡೆದಿದ್ದಾರೆ. ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಸುಷ್ಮಾ ಬೊಪ್ಪನಾ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ ಎಂದು ಬೆಂಗಳೂರಿನ ಶ್ರೀ ಚೈತನ್ಯ ಎಜುಕೇಶನಲ್ ಇನ್‌ಸ್ಟಿಟ್ಯೂಷನ್ಸ್‌ನ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ವಿ. ಸತೀಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT
ಅರ್ಮಾನ್ ಸಿಂಘಾಲ್
ಆಯುಷ್ ರೈ
ರೋಹಿತ್ ರಾಜೀವ್ ನಂಬಿಯಾರ್
ಜಗದೀಶ್ ರೆಡ್ಡಿ ಎಂ.
ಮನೋಜ್ ಸೋಹನ್ ಗಜುಲಾ
ಅನಿಮೇಶ್ ಸಿಂಗ್ ರಾಥೋಡ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.