ADVERTISEMENT

ಬೆಂಗಳೂರು | ಚೈತನ್ಯ ಸ್ಕೂಲ್ ವಿದ್ಯಾರ್ಥಿಗಳು ವಿಶ್ವಚಾಂಪಿಯನ್‌

ನಾಸಾ ಎನ್‌ಎಸ್‌ಎಸ್‌ ಐಎಸ್‌ಡಿಸಿ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 16:44 IST
Last Updated 19 ಜೂನ್ 2024, 16:44 IST
ನಾಸಾದ ಎನ್‌ಎಸ್‌ಎಸ್‌ ಐಎಸ್‌ಡಿಸಿ ಸಮ್ಮೇಳನದಲ್ಲಿ ನಗರದ ಚೈತನ್ಯ ಸ್ಕೂಲ್‌ನ ವಿದ್ಯಾರ್ಥಿಗಳು ಭಾಗವಹಿಸಿ, ವಿಶ್ವಚಾಂಪಿಯನ್‌ಗಳಾಗಿ ಹೊರಹೊಮ್ಮಿದ್ದಾರೆ
ನಾಸಾದ ಎನ್‌ಎಸ್‌ಎಸ್‌ ಐಎಸ್‌ಡಿಸಿ ಸಮ್ಮೇಳನದಲ್ಲಿ ನಗರದ ಚೈತನ್ಯ ಸ್ಕೂಲ್‌ನ ವಿದ್ಯಾರ್ಥಿಗಳು ಭಾಗವಹಿಸಿ, ವಿಶ್ವಚಾಂಪಿಯನ್‌ಗಳಾಗಿ ಹೊರಹೊಮ್ಮಿದ್ದಾರೆ   

ಬೆಂಗಳೂರು: ‘ನಾಸಾ‘ದ ಎನ್‌ಎಸ್‌ಎಸ್‌ ಐಎಸ್‌ಡಿಸಿ ಸಮ್ಮೇಳನದಲ್ಲಿ ನಗರದ ಚೈತನ್ಯ ಸ್ಕೂಲ್‌ನ 167 ವಿದ್ಯಾರ್ಥಿಗಳು ಭಾಗವಹಿಸಿ, ವಿಶ್ವಚಾಂಪಿಯನ್‌ಗಳಾಗಿ ಹೊರಹೊಮ್ಮಿದ್ದಾರೆ ಎಂದು ಚೈತನ್ಯಾ ಸ್ಕೂಲ್‌ ಶೈಕ್ಷಣಿಕ ನಿರ್ದೇಶಕಿ ಸೀಮಾ ತಿಳಿಸಿದ್ದಾರೆ.

ವಿಶ್ವದ 30 ದೇಶಗಳ ವಿದ್ಯಾರ್ಥಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದು, ಭಾರತದಿಂದ 28,000 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಅದರಲ್ಲಿ ಚೈತನ್ಯ ಸ್ಕೂಲ್‌ನ ವಿದ್ಯಾರ್ಥಿಗಳ ಸಂಖ್ಯೆ ಮೊದಲ ಸ್ಥಾನದಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.

62 ಪ್ರಾಜೆಕ್ಟ್‌ಗಳಲ್ಲಿ ವಿವಿಧ ಪ್ರಶಸ್ತಿಗಳನ್ನು ಪಡೆಯುವ ಮೂಲಕ ಸತತ 11ನೇ ಬಾರಿಗೆ ಚೈತನ್ಯ ಸ್ಕೂಲ್‌ ವಿಶ್ವ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. 62 ಪ್ರಾಜೆಕ್ಟ್‌ಗಳಲ್ಲಿ 7ರಲ್ಲಿ ಮೊದಲ ಸ್ಥಾನ, 11ರಲ್ಲಿ ದ್ವಿತೀಯ ಸ್ಥಾನ, 15ರಲ್ಲಿ ತೃತೀಯ ಸ್ಥಾನ ಹಾಗೂ 29 ಪ್ರಾಜೆಕ್ಟ್‌ಗಳು ಗೌರವಾನ್ವಿತ ಪ್ರಶಸ್ತಿಗಳನ್ನು ಪಡೆದಿವೆ. 

ADVERTISEMENT

ಆರ್ಟಿಸ್ಟಿಕ್‌ ಮೆರಿಟ್‌ ವಿಭಾಗದಲ್ಲಿ ಮತ್ತು ಲಿಟರರಿ ಮೆರಿಟ್‌ ವಿಭಾಗದಲ್ಲಿ ವಿಶ್ವದಲ್ಲಿ ತಲಾ ಒಬ್ಬ ವಿದ್ಯಾರ್ಥಿಗೆ ಮಾತ್ರ 500 ಡಾಲರ್‌ ನಗದು ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಎರಡೂ ವಿಭಾಗಗಳ ಪ್ರಶಸ್ತಿಗೆ ಚೈತನ್ಯ ಸ್ಕೂಲ್ ವಿದ್ಯಾರ್ಥಿಗಳು ಪಾತ್ರರಾಗಿದ್ದಾರೆ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.