ಬೆಂಗಳೂರು: 'ಬೈಕ್ ತಾಗಿದೆ ಎಂದು ನನ್ನ ಮಗನನ್ನೆ ಕೊಂದುಬಿಡೋದೆ' ಎಂದು ಚಂದ್ರು ತಾಯಿ ಪ್ರಶ್ನಿಸಿದ್ದಾರೆ.
'ನಾವೆಲ್ಲಾ ಊಟ ಮಾಡಿ ಮಲಗಿದ್ದೆವು. ರಾತ್ರಿ 2 ಗಂಟೆ ಸುಮಾರಿಗೆ ಚಂದ್ರುಗೆ ಸೈಮನ್ ಕರೆಮಾಡಿದ್ದ. ಹೀಗಾಗಿ ನಮಗೆ ಹೇಳದೆಯೇ ಆತ ಮನೆಯಿಂದ ಹೊರಗೆ ಹೋಗಿದ್ದ' ಎಂದು ತಿಳಿಸಿದ್ದಾರೆ.
'ನನ್ನ ಮಗ ತುಂಬಾ ಒಳ್ಳೆಯವನು. ಯಾರ ಸಹವಾಸವನ್ನೂ ಮಾಡಿದವನಲ್ಲ. ಯಾರ ತಂಟೆಗೂ ಹೋದವನಲ್ಲ. ಐಟಿಐ ಮುಗಿಸಿ ಕೆಲಸ ಹುಡುಕುತ್ತಿದ್ದ. ಅವನಿಗೇ ಹೀಗಾಯಿತಲ್ಲ. ಆ ಪಾಪಿಗಳಿಗೆ ಕರುಣೆಯೇ ಇಲ್ಲವೆ' ಎಂದು ರೋಧಿಸಿದರು.
'ರೈಲ್ವೆ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ಕೆಲಸ ಮಾಡುತ್ತಿದ್ದ. ಅತನಿಗೆ ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ನಿಯೋಜಿಸಿದ್ದರು. ಏನಾದರೂ ತೊಂದರೆಯಾಗಬಹುದೆಂದು. ನಾವೇ ಕೆಲಸ ಬಿಡಿಸಿದ್ದೆವು. ಹತ್ತು ದಿನಗಳಿಂದ ಮನೆಯಲ್ಲಿ ಇದ್ದ' ಎಂದು ಕಣ್ಣೀರಿಟ್ಟರು.
'ಕರ್ನಾಟಕದಲ್ಲಿ ಕನ್ನಡ ತಾನೆ ಮಾತಾಡಬೇಕು. ಉರ್ದು ಬರಲಿಲ್ಲ ಅಂತ ಅವನನ್ನು ಸಾಯಿಸಿಬಿಡೋದಾ' ಎಂದು ಸಂಬಂಧಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.
'ನಮ್ಮ ಹುಡುಗ ಯಾರ ಜೊತೆಗಾದ್ರು ಗಲಾಟೆ ಮಾಡಿದ್ದಾನೆಯೇ. ಆತ ಕಬಾಬ್ ತಿನ್ನುವುದಕ್ಕೆ ತೆರಳಿದ್ದ' ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.