ADVERTISEMENT

ಪ್ರತ್ಯೇಕ ಮೀಸಲಾತಿಗೆ ಚರ್ಮಕಾರ ಮಹಾಸಭಾ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 14:26 IST
Last Updated 26 ಅಕ್ಟೋಬರ್ 2024, 14:26 IST
ಭೀಮರಾವ್‌ ಪವಾರ
ಭೀಮರಾವ್‌ ಪವಾರ   

ಬೆಂಗಳೂರು: ‘ರಾಜ್ಯದಲ್ಲಿ ಚರ್ಮಕಾರರ ಉಪ ಜಾತಿಗಳನ್ನು ಮಾದಿಗ ಸಂಬಂಧಿತ ಪಟ್ಟಿಯಿಂದ ಬೇರ್ಪಡಿಸಿ ಶೇಕಡ 3 ರಷ್ಟು ಪ್ರತ್ಯೇಕ ಮೀಸಲಾತಿ ನೀಡಬೇಕು’ ಎಂದು ಅಖಿಲ ಕರ್ನಾಟಕ ಚರ್ಮಕಾರ ಮಹಾಸಭಾ ಶನಿವಾರ ಆಗ್ರಹಪಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ಅಧ್ಯಕ್ಷ ಭೀಮರಾವ್‌ ಪವಾರ, ‘ಮೂಲ ಚರ್ಮಕಾರ ಸಮುದಾಯಗಳಾದ ಸಮಗಾರ, ಢೋರ,  ಡೋಹಾರ, ಮೋಚಿ, ಚಂಬಾರ, ತೆಲುಗು ಮೋಚಿ, ಕಾಮಾಟಿ ಮೋಚಿ, ಚಮಗಾರ್, ಸಮಗಾರ್ ಸೇರಿ 18 ಸಮುದಾಯಗಳನ್ನು ಮಾದಿಗ ಸಂಬಂಧಿತ ಜಾತಿಗಳ ಪಟ್ಟಿಯಿಂದ ಪ್ರತ್ಯೇಕಿಸಿ, ಪ್ರತ್ಯೇಕವಾಗಿ ಶೇ 3ರಷ್ಟು ಮೀಸಲಾತಿ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

‘ರಾಜಕೀಯ ಸೀಟು ಹಂಚಿಕೆ ಮತ್ತು ಸರ್ಕಾರದ ಉನ್ನತ ಹುದ್ದೆಗಳನ್ನು ನೀಡುವಾಗ ಇಷ್ಟು ಪ್ರಮಾಣದ ಮೀಸಲಾತಿಯನ್ನು ಪರಿಗಣಿಸಬೇಕು. ಡಾ.ಅಂಬೇಡ್ಕರ್ ಅವರು 1927ರಲ್ಲಿ ಧಾರವಾಡಕ್ಕೆ ಭೇಟಿ ನೀಡಿ ಉದ್ಘಾಟಿಸಿದ ಮಚಿಗಾರ್ ಸಹಕಾರ ಸಂಘದ ಕಟ್ಟಡ ಮತ್ತು ಸಂಪೂರ್ಣ ನಿವೇಶವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಬೇಕು’ ಎಂದು ಅವರು ಆಗ್ರಹಿಸಿದರು.

ADVERTISEMENT

ರಾಜ್ಯದಲ್ಲಿ ಮೂಲ ಚರ್ಮಕಾರರ ಜನಸಂಖ್ಯೆ 15 ಲಕ್ಷದಿಂದ 16 ಲಕ್ಷದವರೆಗೂ ಇದೆ ಎಂದು ಪ್ರತಿಪಾದಿಸಿದರು. ಮಹಾಸಭಾದ ಗೌರವಾಧ್ಯಕ್ಷ ಮೋಹನ ಉಳ್ಳಿಕಾಶಿ, ಪ್ರಧಾನ ಕಾರ್ಯದರ್ಶಿ ಸುನೀಲ ಮದನಭಾವಿ, ಉಪಾಧ್ಯಕ್ಷ ಶಿವಲಿಂಗಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.